ಪ್ರಮುಖ ಸುದ್ದಿಸಂಸ್ಕೃತಿ
ಉತ್ಸವ ಮೂರ್ತಿ ದರ್ಶನ ಪಡೆದ ಮಾಜಿ ಶಾಸಕ
ಕೋವಿಡ್‍ಃ ಸಿದ್ಧಲಿಂಗೇಶ್ವರ ಜಾತ್ರೆ ಸರಳ
ಶಹಾಪುರಃ ತಾಲೂಕಿನ ಶಿರವಾಳ ಗ್ರಾಮದ ಆರಾಧ್ಯ ದೇವರಾದ ಶ್ರೀಸಿದ್ಧಲಿಂಗೇಶ್ವರ ಜಾತ್ರೆ ಈ ಬಾರಿ ಕೋವಿಡ್ ಹಿನ್ನೆಲೆ ಸರಳವಾಗಿ ಜರುಗಿತು. ಜಾತ್ರೆ ನಿಮಿತ್ತ ಸಿದ್ಧಲಿಂಗೇಶ್ವರ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿ ಮೆರವಣಿಗೆ ಗ್ರಾಮದಲ್ಲಿ ಜರುಗಿತು.
ಈ ಸಂದರ್ಭ ಮಾಜಿ ಶಾಸಕ ಗುರು ಪಾಟೀಲ್ ಶ್ರೀದೇವರ ದರ್ಶನ ಪಡೆದರು. ಐದು ದಿನಗಳವರೆಗೆ ಅದ್ದೂರಿಯಾಗಿ ನಡೆಯುವ ಜಾತ್ರೆ ಈ ಬಾರಿ ಕೊರೊನಾ ಹಿನ್ನೆಲೆ ಸರಳವಾಗಿ ಆಚರಿಸಲಾಯಿತು.
ಕೊರೊನಾ ನಿಯಮಗಳನ್ನು ಪಾಲಿಸುವ ಮೂಲಕ ಜಾತ್ರೆ, ಧಾರ್ಮಿಕ ಕಾರ್ಯಕ್ರಮ ಜರುಗಿದವು. ಗ್ರಾಮಸ್ಥರು ನೈವೇದ್ಯ, ಕಾಯಿ ಕರ್ಪೂರ ಅರ್ಪಿಸಿ ಕೃತಜ್ಞತೆ ಸಲ್ಲಿಸಿದರು. ಸುತ್ತಲಿನ ಗ್ರಾಮಸ್ಥರು, ಭಕ್ತಾಧಿಗಳು ಆಗಮಿಸಿ ಸಾಲಾಗಿ ನಿಮತು ಕಾಯಿ ಕರ್ಪೂರ ಅರ್ಪಿಸಿ ಭಕ್ತಿ ಸಮರ್ಪಣೆಗೈದರು. ಪಲ್ಲಕ್ಕಿ ಉತ್ಸವದಲ್ಲಿ ಸ್ಥಳೀಯರು ಭಾಗವಹಿಸಿದ್ದರು. ಒಟ್ಟಾರೆ ಕೊರೊನಾ ಎಫೆಕ್ಟ್ ನಿಂದಾಗಿ ಜಾತ್ರೆ ಸಪ್ಪೆಯಾಗಿತ್ತು ಎಂದು ಹೇಳಬಹುದು. ಆದರೆ ಶ್ರೀದೇವರ ದರ್ಶನ ಭಾಗ್ಯ ಮಾತ್ರ ಭಕ್ತಾಧಿಗಳಿಗೆ ಲಭ್ಯವಿತ್ತು.