ಭೀ.ಗುಡಿ ಶಿವ ಮಂದಿರದಲ್ಲಿ ಸಾಂಸ್ಕೃತಿಕ ಜಾನಪದ ಜಾಗರಣೆ
21 ರಂದು ಸಾಂಸ್ಕೃತಿಕ ಜಾನಪದ ಜಾಗರಣ ಕಾರ್ಯಕ್ರಮ
ಶಹಾಪುರ; ವೀರ ಕೇಸರಿ ಕಲಾ, ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಕಳೆದ 9 ವರ್ಷಗಳಿಂದ ನಿರಂತರ ವಾಗಿ ಜಾನಪದ ಜಾಗರಣೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದು, ಪ್ರತಿವರ್ಷದಂತೆ ಈ ವರ್ಷವು ಫೆ. 21 ರಂದು ರಾತ್ರಿ 8 ಗಂಟೆಗೆ ಭೀಮರಾಯನ ಗುಡಿ ಪ್ರದೇಶದಲ್ಲಿರುವ ಶ್ರೀ ಶಿವ ದೇವಾಲಯದಲ್ಲಿ ಜಾನಪದ ಜಾಗರಣೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಭೀಮಣ್ಣ ಶಖಾಪುರ ತಿಳಿಸಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೈಲಾಸ ಆಶ್ರಮದ ಶಿವಲಿಂಗೇಶ್ವರ ಮಹಾಸ್ವಾಮಿಗಳು, ವಿಶ್ವರಾಧ್ಯ ಆನಂದಾಶ್ರಮದ ಮಹಾಂತ ಶಿವಯೋಗಿಗಳು ಹಾಗೂ ನಾಗನಟಗಿಯ ಸಿದ್ರಾಮಯ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮತ್ತು ಕರವೇ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ ಪಡಕೋಟೆ ಯವರು ಉದ್ಘಾಟಿಸಲಿದ್ದಾರೆ.
ಅಲ್ಲದೆ ಕಲರ್ಸ್ ಸುಪರ್ ವಾಹಿನಿಯ ಕನ್ನಡ ಕೋಗಿಲೆಯ ಖ್ಯಾತ ಗಾಯಕಿ ಉಮಾ ವೈ,ಜಿ ಕಲಾ ತಂಡದವರಿಂದ ಜಾನಪದ ನೃತ್ಯ ಹಾಗೂ ಹಾಡುಗಳ ಸಂಭ್ರಮ ಮತ್ತು ಕನ್ನಡದ ಹೆಸರಾಂತ ಹಿರಿಯ ಮತ್ತು ಕಿರಿಯ ಚಲನಚಿತ್ರ ನಟ ನಟಿಯರು ಭಾಗವಹಿಸಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಅವರು ತಿಳಿಸಿದ್ದಾರೆ. ಸಮಸ್ತ ಭಕ್ತಾಧಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.