ಪ್ರಮುಖ ಸುದ್ದಿ
ಐಟಿ ದಾಳಿಗೆ ಶಿವಕುಮಾರ-ಪರಮೇಶ್ವರರ ನಡುವೆ ನಡೆದ ಭೂ ವ್ಯವಹಾರ ಕಾರಣವೇ.?
ಬೆಂಗಳೂರಃ ಶಿವಕುಮಾರ ಮತ್ತು ಮಾಜಿ ಡಿಸಿಎಂ ಪರಮೇಶ್ವರ ಅವರ ನಡುವೆ ಭೂ ವ್ಯವಹಾರ ನಡೆದಿದೆ ಎನ್ನಲಾಗಿದ್ದು, ಕೇವಲ ಹದಿನೈದು ದಿನಗಳ ಹಿಂದೆ ಸಿದ್ಧಾರ್ಥ ಕಾಲೇಜಿಗೆ 3 ಎಕರೆ ಭೂಮಿಯನ್ನು ಪುರಸಭೆ ಸದಸ್ಯ ಶಿವಕುಮಾರ ಎಂಬುವರು ಜಿಪಿಎ ಮಾಡಿಸಿದ್ದರು ಎಂಬ ವಿಷಯ ತಿಳಿದು ಬಂದಿದೆ.
ಪರಮೇಶ್ವರರಿಗೆ 3 ಎಕರೆ ಜಮೀನನ್ನು ಜಿಪಿಎ ಮಾಡಿಸಿರುವದು ಇದೇ ಶಿವಕುಮಾರ ಆಗಿರುವ ಕಾರಣ, ಐಟಿ ಅಧಿಕಾರಿಗಳು ಶಿವಕುಮಾರ ಅವರ ಮನೆ ಮೇಲೂ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಕಳೆದ ಮೂರು ತಿಂಗಳಿಂದ ಪರಮೇಶ್ವರ ಅವರಿಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದ ಐಟಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.