ಪ್ರಮುಖ ಸುದ್ದಿ

ಮನಗೂಳಿಗೆ ಶುಭ ಹರಸಿದ ಬರಹಗಾರ ಉಪ್ಪಿನ್

ಮನಗೂಳಿಗೆ ಶುಭ ಹರಸಿದ ಬರಹಗಾರ ಉಪ್ಪಿನ್

ಸಿಂದಗಿ: ಸಿಂದಗಿ ಮತ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆದ ಅಶೋಕ ಮನಗೂಳಿ ಅವರಿಗೆ ಬಸವಣ್ಣನವರ ಭಾವ ಚಿತ್ರ ನೀಡಿ ಬರಹಗಾರ ಮತ್ತು ಲಿಂಗಾಯತ ಹೋರಾಟಗಾರ ಶಿವಕುಮಾರ್ ಉಪ್ಪಿನ ಶುಭ ಹರಸಿದರು.

ಇಲ್ಲಿನ ತಾಲ್ಲೂಕು ಶಿಕ್ಷಣ ಸಂಸ್ಥೆ ಕಚೇರಿಯಲ್ಲಿ ಭೇಟಿಯಾಗಿ, ಬಸವಾದಿ ಶರಣರ ಆಶೀರ್ವಾದ ತಮ್ಮ ಮೇಲೆ ಇರಲಿ. ಗೆದ್ದು ಬಂದು ಜನಪರವಾಗಿ ಅಭಿವೃದ್ಧಿ ಕೆಲಸ ಮಾಡಿ ಎಂದು ಶುಭ ಕೋರಿದರು.

ಅಶೋಕರು ಲಿಂಗಾಯತ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸರಳ ವ್ಯಕ್ತಿಯಾಗಿದ್ದು, ಅವರ ತಂದೆಯ ಹಾದಿಯಂತೇ ಕ್ಷೇತ್ರಕ್ಕೆ ಏನಾದರೂ ಮಾಡಲು ಬಯಸಿದ್ದಾರೆ. ಎಂ.ಸಿ.ಮನಗೂಳಿಯವರ ಯೋಜನೆ, ಅಭಿವೃದ್ಧಿ ಕೆಲಸಗಳ ಪ್ರಗತಿಗೆ ತೆರೆಮರೆಯಲ್ಲಿ ಇವರ ಪಾತ್ರವಿತ್ತು. ನೇರವಾಗಿ ಜನರ ಸಂಪರ್ಕದಲ್ಲಿದ್ದಾರೆ. ಇದೆಲ್ಲ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಉಪ್ಪಿನ್ ಹೇಳಿದರು.

ಗೋಲಗೇರಿಯ ಮುಖಂಡ ರವಿರಾಜ್ ದೇವರಮನಿ ಮಾತನಾಡಿ, ಅಶೋಕ್ ಅವರು ಜಾತ್ಯತೀತ ಮತಗಳು ಒಟ್ಟಾಗಲು ಮತ್ತು ಕ್ಷೇತ್ರದ ಅಭಿವೃದ್ಧಿ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಅವರ ಜತೆ ಸಾವಿರಾರು ಕಾರ್ಯಕರ್ತರು ಇದ್ದಾರೆ.

ಅವರೆಲ್ಲ ಗೆಲುವಿಗೆ ಶ್ರಮಿಸಲಿದ್ದು, ಕಾಂಗ್ರೆಸ್ ನ ಪ್ರಮುಖ ನಾಯಕರೆಲ್ಲ ಒಟ್ಟಾಗಿದ್ದು, ಇವರ ಬೆಂಬಲಕ್ಕೆ ಇದ್ದಾರೆ. ಜಯ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಿಂದುಳಿದ ವರ್ಗದ ಮುಖಂಡ ಪರಶುರಾಮ್ ಕಾಂಬಳೆ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button