ವಿನಯ ವಿಶೇಷ
ಹ್ಯಾಟ್ರಿಕ್ ಹಿರೋ ಶಿವರಾಜ ಕುಮಾರ್ ಇನ್ನು ಶಾಲಾ ಶಿಕ್ಷಕ!
ಬೆಂಗಳೂರು : ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ್ ಹೊಸ ಚಿತ್ರವೊಂದಕ್ಕೆ ಸಹಿ ಹಾಕಿದ್ದು ಚಿತ್ರಕ್ಕೆ ದ್ರೋಣ ಎಂಬ ಟೈಟಲ್ ಅಂತಿಮಗೊಳಿಸಲಾಗಿದೆ. ವಿಶೇಷ ಅಂದರೆ ನಟ ಶಿವಣ್ಣ ಈ ಚಿತ್ರದಲ್ಲಿ ಶಿಕ್ಷಕನ ಪಾತ್ರದಲ್ಲಿ ಮಿಂಚಲಿದ್ದಾರೆ ಎಂದು ತಿಳಿದು ಬಂದಿದೆ.
ನಟ, ನಿರ್ದೇಶಕ ಪ್ರಮೋದ್ ಚಕ್ರವರ್ತಿ ನಿರ್ದೇಶನದಲ್ಲಿ ಚಿತ್ರ ಮೂಡಿ ಬರುತ್ತಿದೆ. ಜೂನ್ 22ಕ್ಕೆ ಚಿತ್ರದ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಆಗಷ್ಟ್ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎನ್ನಲಾಗಿದೆ. ಡಾಲ್ಫಿನ್ ಮೀಡಿಯಾ ಹೌಸ್ ನಿರ್ಮಾಣದಲ್ಲಿ ಚಿತ್ರ ನಿರ್ಮಾಣ ಆಗುತ್ತಿದ್ದು ಸ್ವಾತಿ ಶರ್ಮಾ, ಬಾಬು ಹಿರಣಯ್ಯ , ಪ್ರಕಾಶ್ ಹೆಗ್ಗೋಡು, ಸಾಧುಕೋಕಿಲಾ, ರಂಗಾಯಣ ರಘು ಸೇರಿದಂತೆ ಇತರೆ ಕಲಾವಿದರು ತಾರಾಗಣದಲ್ಲಿದ್ದಾರೆ.