ಪ್ರಮುಖ ಸುದ್ದಿಬಸವಭಕ್ತಿ

ಶಿವ ನಿಷ್ಕಲ್ಮಶ ಮನಸ್ಸುಗಳ ಪ್ರತೀಕ – ಹೊನ್ಕಲ್

ಶಿವರಾತ್ರಿಃ ಭಜನೆ, ಶಿವ ನೃತ್ಯ, ಸಂಗೀತದ ಮೂಲಕ ಶಿವ ಸ್ಮರಣೆ ಸಂಭ್ರಮ

ಶಿವ ನಿಷ್ಕಲ್ಮಶ ಮನಸ್ಸುಗಳ ಪ್ರತೀಕ – ಹೊನ್ಕಲ್

ಶಿವರಾತ್ರಿಃ ಭಜನೆ, ಶಿವ ನೃತ್ಯ, ಸಂಗೀತದ ಮೂಲಕ ಶಿವ ಸ್ಮರಣೆ ಸಂಭ್ರಮ

yadgiri, ಶಹಾಪುರಃ ಶಿವ ಪ್ರಾಮಾಣಿಕ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಶಿವ ಭಕ್ತರಿಂದ ಬಯಸುವದು ಪ್ರಾಮಾಣಿಕ ಮತ್ತು ನಿಷ್ಕಲ್ಮಶ ಭಕ್ತಿ ಮಾತ್ರ ಎಂದು ಖ್ಯಾತ ಸಾಹಿತಿ ಸಿದ್ಧರಾಮ ಹೊನ್ಕಲ್ ತಿಳಿಸಿದರು.

ಲಕ್ಷ್ಮೀ ನಗರದ ಆಂಜನೇಯ ದೇವಸ್ಥಾನ ಆವರಣದಲ್ಲಿ ಶಿವರಾತ್ರಿ ಪ್ರಯುಕ್ತ ಆಯೋಜಿಸಿದ ಶಿವ ಸ್ಮರಣೆ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಕತ್ತಲೆಂಬ ಅಜ್ಞಾನವನ್ನು ತೊರೆದು ಬೆಳಕಿನ ಸುಜ್ಞಾನದಡೆಗೆ ನಡೆಯುವ ಮಾರ್ಗ ಕಂಡುಕೊಳ್ಳುವದೇ ಶಿವರಾತ್ರಿ. ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಯಾವುದೇ ದೇವರಾಗಲಿ ಬಯಸುವದಿಲ್ಲ. ಆಡಂಬರಗಳಿಂದ ಮುಕ್ತರಾಗಿ ಸರಳತೆಯಿಂದ ಪರಶಿವನ ಧ್ಯಾನಿಸಿದರೆ ಸಾಕು. ಕಾಯಕ ದಾಸೋಹಿ ಪರಿಕಲ್ಪನೆ ನೀಡಿ ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿ ಸಮಾನತೆ ಭ್ರಾತೃತ್ವ ಭಾವನೆ ನೀಡಿ ಇವನಾರವ ಎನ್ನದೆ ಎಲ್ಲರೂ ನಮ್ಮವರೇ ಎಂದು ಸಾರಿದ ಬಸವಣ್ಣನ ಭಕ್ತಿಯೂ ಅದೇ ಸರಳತೆಯಿಂದ ಕೂಡಿತ್ತು ಆ ಕಾರಣಕ್ಕೆ ಆತನನ್ನು ಭಕ್ತಿ ಭಂಡಾರಿ ಬಸವಣ್ಣ ಎಂದು ಸಂಬೋಧಿಸಲಾಯಿತು.
ಪ್ರಸ್ತುತ ಅಣ್ಣ ಬಸವಣ್ಣನವರನ್ನು ಈ ನಾಡಿನ ಸಾಂಸ್ಕøತಿಕ ನಾಯಕವೆಂದು ಘೋಷಿಸಿರುವದು ಸಂತಸ ಸಂಗತಿಯಾಗಿದೆ. ಸರ್ವರ ಏಳ್ಗೆಯನ್ನು ಬಯಸಿದ ಶರಣ ಸಂಕುಲದಂತೆ ನಾವೆಲ್ಲ ಒಂದಾಗಿ ನಡೆಯಬೇಕಿದೆ. ಲಕ್ಷ್ಮೀ ನಗರದಲ್ಲಿ ಸರ್ವರೂ ಜನಾಂಗದವರು ಕೂಡಿ ಸಾಹಿತ್ಯ, ಸಂಗೀತ, ಯೋಗ, ಸಾಮಾಜಿಕ ಪ್ರಮುಖರನ್ನ ಕರಿಸಿ ಉತ್ತಮ ಕಾರ್ಯಕ್ರಮ ಏರ್ಪಡಿಸಿದ್ದಕ್ಕಾ ಸಂಘಟಕರಿಗೆ ಅನಂತ ಧನ್ಯವಾದಗಳು ಎಂದು ಪ್ರೇರಣಾತ್ಮಕ ನುಡಿಗಳನ್ನು ತಿಳಿಸಿದರು.

ಶಹಾಪುರಃ ಲಕ್ಷ್ಮೀ ನಗರದ ಆಂಜನೇಯ ದೇವಸ್ಥಾನದಲ್ಲಿ ಶುಕ್ರವಾರ  ಜಾಗರಣೆ  ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ  ಶಿವ ನೃತ್ಯ, ಮಾಡಿದ ಬಾಲಕಿ ಸೃಷ್ಠಿ ಹೂಗಾರ ನೋಟ.

ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಪತ್ರಕರ್ತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದನೂರ, ಯೋಗ ಗುರುಗಳಾದ ನರಸಿಂಹ ವೈದ್ಯ ಮಾತನಾಡಿ, ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿಸುವ ಮೂಲಕ ಮಕ್ಕಳಿಗೆ ಸಂಸ್ಕಾರ ನೀಡುವ ಜತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತುವಲ್ಲಿ ಸಹಕಾರವಾಗಲಿದೆ ಎಂದರು. ಕರವೇ ಉಕ ಅಧ್ಯಕ್ಷ ಶರಣು ಗದ್ದುಗೆ, ಬಡವಾಣೆಯ ಹಿರಿಯ ಕೆಂಚಪ್ಪ ನಗನೂರ, ಜೇವರ್ಗಿ ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಮಾತನಾಡಿದರು. ಪ್ರಮುಖರಾದ ಶಂಕರಗೌಡ, ಸೋಮನಗೌಡ, ಸಂಗೀತ ಶಿಕ್ಷಕ ಚಂದ್ರು ಗೋಗಿ, ಗುರು ಶೆಟ್ಟಿ, ಕಾವೇರಿ ಪತ್ತಾರ ಉಪಸ್ಥಿತರಿದ್ದರು.

ಶಿವ ತಾಂಡವ ನೃತ್ಯವನ್ನು ಬಾಲಕಿ ಸೃಷ್ಟಿ ಹೂಗಾರ ಪ್ರದರ್ಶಿಸಿದರು. ಗಾಯಕರಾದ ಚಂದ್ರಕಲಾ ಜಮಖಂಡಿ, ಮಲ್ಲಯ್ಯ ಸ್ವಾಮಿ, ಗಣೇಶ ಪತ್ತಾರ, ಗಣೇಶ ಪೋಲಿಸ್, ಸಂಗಿತ ಶಿಕ್ಷಕಿ ಕಾವೇರಿ, ಲಿಂಗಣ್ಣಗೌಡ, ಅಶೋಕ ಇಟಗಿ ಇತರರು ಶಿವನ ಸ್ತುತಿ ಮತ್ತು ಶಿವನ ಸ್ಮರಣಾರ್ಥ ಹಾಡುಗಳನ್ನು ಹಾಡುವ ಮೂಲಕ ಬೆಳಗಿನಜಾವದವರೆಗೂ ಜಾಗರಣೆ ಮಾಡಿದರು.
ಕಾರ್ಯಕ್ರಮ ಸಂಘಟಕ ಸಂಗನಗೌಡ ಪಾಟೀಲ್ ಪ್ರಾಸ್ತವಿಕವಾಗಿ ಮಾತನಾಡಿದರು. ಶಿವಕುಮಾರ ಕರದಳ್ಳಿ ಸ್ವಾಗತಿಸಿದರು. ಲಕ್ಷ್ಮಣ ಲಾಳಸಗೇರಿ ನಿರೂಪಿಸಿದರು. ಚಂದ್ರು ಜೀನಕೇರಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button