ಶಿವಸೇನೆ ಜೊತೆ ಸೇರಿ ಸರ್ಕಾರ ರಚನೆಗೆ NCP ಆಫರ್
ಮಹಾರಾಷ್ಟ್ರಃ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಸರ್ಕಾರ ಮೊದಲಿಂದಲೂ ನಡೆಸುತ್ತಾ ಬಂದಿವೆ. ಆದರೆ ಈ ಬಾರಿ ಶಿವಸೇನೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ಹಿನ್ನೆಲೆ ಚರ್ಚೆ ನಡೆಯುತ್ತಿದೆ.
ಆದರೆ ಎನ್ ಸಿಪಿ ಶಿವಸೇನೆಗೆ ಆಫರ್ ನೀಡಿದ್ದು, ಶಿವಸೇನೆ ಜೊತೆ ಸೇರಿ ಸರ್ಕಾರ ನಡೆಸಲು ನಾವು ಸಿದ್ಧವೆಂದು ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಆಫರ್ ನೀಡಿದೆ. ಆದರೆ ಶಿವಸೇನೆ ಈ ಆಫರ್ ನ್ನು ಸಿರಸ್ಕರಿಸಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಮತ್ತು ಶಿವಸೇನೆ ಮಹಾರಾಷ್ಟ್ರದಲ್ಲಿ ಒಂದು ರೀತಿ ಗಂಡ ಹೆಂಡತಿ ಇದ್ದಂಗೆ. ಹಾಗೇ ಕಿತ್ತಾಡ್ತಾರೆ ಮತ್ತೆ ಒಗ್ಗೂಡಿ ಸಾಗುವದು ಅಲ್ಲಿ ಸರ್ವೇ ಸಾಮಾನ್ಯವಾಗಿದೆ. ಒಂದೇ ಮನೆಯಂತೆ ಮತ್ತೆ ಕೂಡಿ ನಡೆಯುತ್ತವೆ. ಬಿಜೆಪಿ ಶಿವಸೇನೆ ಯ ನಡೆ ಒಂದೇ ಆಗಿರುವ ಕಾರಣ ಅವೆರಡು ಸರಿಪಡಿಸಿಕೋಂಡು ತಮ್ಮ ತಮ್ಮ ಸಿದ್ಧಾಂತ ಪ್ರಕಾರ ನಡೆದುಕೊಳ್ಳುತ್ತವೆ. ಆದರೆ ಎನ್ಸಿಪಿ ಜೊತೆ ಹೊಂದಾಣಿಕೆಗೆ ಶಿವಸೇನೆ ಸಿದ್ಧವಿಲ್ಲ ಹೀಗಾಗಿ ಯಾರೇ ಸಿಎಂ ಆಗಲಿ ಬಿಜೆಪಿ ಮತ್ತು ಶಿವಸೇನೆ ಮಾತ್ರ ಒಗ್ಗೂಡಿ ಸರ್ಕಾರ ರಚನೆ ಮಾಡಲಿವೆ.