ರಾಜ್ಯದಲ್ಲಿ ಶಿವಸೇನೆ ಕಾರ್ಯಾರಂಭಃ ಆಂದೋಲಾ ಶ್ರೀ ಘೋಷಣೆ
ಕರುನಾಡಿಗೆ ಶಿವಸೇನೆ ಪಾದಾರ್ಪಣೆಃ
ನಾಡಿನ ನೆಲ, ಜಲ ಪ್ರಶ್ನೆ ಬಂದಾಗ ಪಕ್ಷದ ವಿರೋಧಕ್ಕೆ ಸಿದ್ಧ
ಹುಬ್ಬಳ್ಳಿಃ ಕರುನಾಡಿಗೆ ಇಂದು ಶಿವಸೇನೆ ಪಕ್ಷ ಪಾದಾರ್ಪಣೆ. ರಾಜ್ಯದಲ್ಲಿ ಇಂದಿನಿಂದ ಶಿವಸೇನೆ ಪಕ್ಷ ರಾಜ್ಯದಲ್ಲಿ ಉದಯಿಸಿದ್ದು, ತನ್ನ ಕಾರ್ಯಾ ಚಟುವಟಿಕೆಯನ್ನು ವಿಸ್ತರಿಸಲಿದೆ. ರಾಜ್ಯದಲ್ಲಿ ಹಿಂದೂಗಳ ಸರಣಿ ಕೊಲೆ ನಡೆಯುತ್ತಿವೆ. ನಮ್ಮ ರಾಜ್ಯಕ್ಕೆ ಹಿಂದುತ್ವ ಪಕ್ಷ ಬೇಕಾಗಿತ್ತು ಎಂದು ಶ್ರೀರಾಮ ಸೇನೆ ಗೌರವಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ಜನ್ಮದಿನವಾದ್ದರಿಂದ ಇಂದಿನಿಂದ ಪಕ್ಷ ಕಾರ್ಯಾರಂಭ ಮಾಡಿದ್ದೇವೆ. ಹಿಂದುತ್ವ ಮತ್ತು ದೇಶದ ಅಭಿವೃದ್ಧಿ, ಧರ್ಮ, ಸಂಸ್ಕೃತಿ ರಕ್ಷಣೆಗಾಗಿ ಸದಾ ಸಿದ್ಧರಿರುವ ಆ ದಿಸೆಯಲ್ಲಿ ಕಾರ್ಯೋನ್ಮುಖರಾಗಿರುವ ನಮಗೆ , ನಮ್ಮ ಪಕ್ಷಕ್ಕೆ ನಾಗರಿಕರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕದ ವಿಷಯ ಬಂದಾಗ, ನಮ್ಮ ನೆಲ, ಜಲ ವಿಷಯ ಬಂದಾಗ ಪಕ್ಷದ ವಿರುದ್ಧ ನಿಲ್ಲಲು ಸಿದ್ಧರಿದ್ದೇವೆ. 2018 ರಾಜ್ಯ ವಿಧಾನಸಭೆ ಚುನಾವಣೆಗೆ 224 ಕ್ಷೇತ್ರಗಳಿಗೂ ನಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಲಿದ್ದೇವೆ. ಬರುವ ದಿನಗಳಲ್ಲಿ ಸಭೆ ನಡೆಸಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ಶೀಘ್ರದಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ಅಂದು ಪ್ರಮೋದ ಮುತಾಲಿಕ್ ಅವರು ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂದರು.