ಪ್ರಮುಖ ಸುದ್ದಿ
ಫೆ.24 ಸೋಮವಾರ ಶಿವಶೇಖರಪ್ಪಗೌಡ ಶಿರವಾಳರ ಪುಣ್ಯಸ್ಮರಣೆ
ದಿ.ಶಿವಶೇಖರಪ್ಪಗೌಡ ಶಿರವಾಳರ ಪುಣ್ಯಸ್ಮರಣೆ
ಶಹಾಪುರಃ ಕ್ಷೇತ್ರದ ಮಾಜಿ ಶಾಸಕ ಸರಳ ಸಜ್ಜನಿಕೆಗೆ ಹೆಸರುವಾಸಿಯಾಗಿದ್ದ ಸಾರ್ವಜನಿಕರ ಆಶೋತ್ತರಗಳಿಗೆ ಸದಾ ಸ್ಪಂಧಿಸುತ್ತಿದ್ದ ದಿ.ಶಿವಶೇಖರಪ್ಪಗೌಡ ಪಾಟೀಲ್ ಶಿರವಾಳ ಅವರ 10 ನೇಯ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ತಾಲೂಕಿನ ಶಿರವಾಳ ಗ್ರಾಮದಲ್ಲಿ ಫೆ.24 ಸೋಮವಾರದಂದು ಜರುಗಲಿದೆ.
ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಹಿರಿಯ ಮುಖಂಡರು, ಜನಪ್ರತಿನಿಧಿಗಳು ಮತ್ತು ಅವರ ಅಭಿಮಾನಿಗಳು ಶಿರವಾಳ ಕುಟುಂಬದ ಹಿತೈಷಿಗಳು ಭಾಗವಹಿಸುತ್ತಿದ್ದು, ನಾಗರಿಕರು ಈ ಪುಣ್ಯಮಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕುಟಂಬದ ಹಿರಿಯ ಶಿವಪುತ್ರಪ್ಪಗೌಡ ಪಾಟೀಲ್ ಶಿರವಾಳ, ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಸೇರಿದಂತೆ ಶಿರವಾಳ ಪರಿವಾರ ಮತ್ತು ಅವರ ಅಪಾರ ಅಭಿಮಾನಿ ಬಳಗ ಕೋರಿದೆ.