ಪ್ರಮುಖ ಸುದ್ದಿ
ಎಚ್ಡಿಕೆ ಆಲೂಗಡ್ಡೆ ಬೆಳೆದು ಶ್ರೀಮಂತರಾಗಿದ್ದಾರೆ-ಕರೆದ್ಲಾಂಜೆ
ಮೈಸೂರಃ ಶೋಭಾ ಕರಂದ್ಲಾಜೆ ಅವರಿಗೇನು ಗೊತ್ತು ರೈತರ ಕಷ್ಟ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಶೋಭಾ ಕರಂದ್ಲಾಜೆ ಅವರು, ನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹೌದು ಎಚ್ಡಿಕೆ ಅವರು ಆಲುಗಡ್ಡೆ ಬೆಳೆದೆ ಇಷ್ಟೊಂದು ಶ್ರೀಮಂತರಾಗಿದ್ದಾರೆ. ಅವರಿಗೇ ಎಲ್ಲಾ ಗೊತ್ತು ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಎಚ್ಡಿಕೆ ಅವರೊಬ್ಬರೆ ರೈತನ ಮಕ್ಕಳು ಎನ್ನುವಂತೆ ತಾವೇ ಖುದ್ದಾಗಿ ಕೃಷಿ ಮಾಡಿದವರಂತೆ ಮಾತನಾಡುತ್ತಿದ್ದಾರೆ. ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಉದ್ಭವವಾದ ಪ್ರಶ್ನೆಗೆ ಈ ವಾಗ್ವಾದ ಪರಸ್ಪರರ ಕೆಸೆರೆಚಾಟ ನಡೆದಿದೆ ಎನ್ನಬಹುದು.
ಇದೇ ಸಂದರ್ಭದಲ್ಲಿ ಕರಂದ್ಲಾಜೆ ಅವರು ನೆರೆ ಪರಿಹಾರ ಈಗಾಗಲೇ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ. ಇನ್ನುಳಿದ ಪರಿಹಾರ ಹಂತ ಹಂತವಾಗಿ ನೀಡಲಿದೆ ಎಂದು ತಿಳಿಸಿದರು.