ಪ್ರಮುಖ ಸುದ್ದಿ
ಶೋಭಾ ಕರಂದ್ಲಾಜೆ ಬರಿಗಾಲಲಿ ಚಾಮುಂಡಿ ಬೆಟ್ಟ ಹತ್ತಿದ್ಯಾಕೆ.?
ಶೋಭಾ ಕರಂದ್ಲಾಜೆ ಬರಿಗಾಲಲಿ ಚಾಮುಂಡಿ ಬೆಟ್ಟ ಹತ್ತಿದ್ದೇಕೆ.?
ಮೈಸೂರಃ ಇಂದು ಆಷಾಢ ಮಾಸದ ಕಡೆ ಶುಕ್ರವಾರ ಹಿನ್ನೆಲೆ ಸಂಸದೆ ಶೋಭಾ ಕರಂದ್ಲಾಜೆ ಬರಿಗಾಲಲಿ ಮೆಟ್ಟಿಲುಗಳ ಮೂಲಕ ಚಾಮುಂಡಿ ಬೆಟ್ಟ ಹತ್ತಿ ನಾಡ ದೇವತೆ ಚಾಮುಂಡಿ ದೇವಿ ದರ್ಶನ ಪಡೆದರು.
ತುಂತುರು ಮಳೆ ನಡುವೆಯು ಸಾವಿರ ಮೆಟ್ಟಿಲುಗಳನ್ನು ಹತ್ತಿ ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು, ಪ್ರತಿ ವರ್ಷ ಆಷಾಢ ಮಾಸ ಕಡೆ ಶುಕ್ರವಾರ ಚಾಮುಂಡಿ ದೇವಿಯ ದರ್ಶನವನ್ನು ಪಡೆಯುತ್ತಾ ಬಂದಿದ್ದೇನೆ ಮೆಟ್ಟಿಲುಗಳ ಮೂಲಕವೇ ಹಾದು ಬರುತ್ತೇನೆ.
ಅದರಂತೆ ಈ ಬಾರಿಯು ಮೆಟ್ಟಿಲು ಹತ್ತಿ ಬಂದಿದ್ದು ನಾಡದೇವತಯಲ್ಲಿ ಇಡಿ ವಿಶ್ವದಾದ್ಯಂತ ತಾಂಡವವಾಡುತ್ತಿರುವ ಮಹಾಮಾರಿ ಕೊರೊನಾ ಜಗತ್ತಿನಿಂದಲೇ ಕಣ್ಮರೆಯಾಗಿ, ನಾಡಿನ ಜನತೆಗೆ ಆರೋಗ್ಯ, ಸುಖ, ಶಾಂತಿ ಲಭಿಸಲಿ ಎಂದು ಪ್ರಾರ್ಥನೆ ಸಲ್ಲಿಸಿರುವದಾಗಿ ತಿಳಿಸಿದ್ದಾರೆ.