ಕ್ಯಾಂಪಸ್ ಕಲರವಪ್ರಮುಖ ಸುದ್ದಿ

ಮೊಬೈಲ್‍ನಿಂದ ಬದುಕಿಗೆ ಆಪತ್ತು ತಂದುಕೊಳ್ಳಬೇಡಿ ನೀಲಾ ಸಲಹೆ

ಡಾ.ಅಂಬೇಡ್ಕರರ ಆಶೋತ್ತರ, ಆದರ್ಶ ಪಾಲಿಸಿ-ಕೆ.ನೀಲಾ

ಜ್ಞಾನ ಸಂಪಾದನೆಗೆ ಮೊಬೈಲ್ ಸಹಕಾರ ಪಡೆಯಿರಿ

ಶಹಾಪುರಃ ಹಿಂದೆ ವಿದ್ಯಾರ್ಥಿಗಳ ಜೀವನ ಎಂದರೆ ಬಂಗಾರದ ಜೀವನ ಎನ್ನಲಾಗಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳ ಜೀವನ ಕೇವಲ ಮೊಬೈಲ್ ಲೈಫ್ ಆಗಿದೆ ಎಂದರೆ ತಪ್ಪಿಲ್ಲ ಎಂದು ರಾಜ್ಯ ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ.ನೀಲಾ ಮಾರ್ಮಿಕವಾಗಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2019-20ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್ನೆಸ್ಸೆಸ್, ರೆಡ್ ಕ್ರಾಸ್, ರೋವರ ಮತ್ತು ರೇಂಜರ್ಸ್ ಚಟುವಟಿಕೆಗಳ ಉದ್ಘಾಟನೆ ಹಾಗೂ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇವತ್ತಿನ ದಿನ ಎಲ್ಲರ ಕೈಗಳಲ್ಲಿ ಮೊಬೈಲ್ ಹಿಡಿದು ಅದರಿಂದ ಏನಾದರೂ ಸದ್ಭಳಿಕೆ ಮಾಡಿಕೊಳ್ಳುತ್ತಿದ್ದೀರಿ ಎಂದರೆ ಅದಕ್ಕೆಲ್ಲ ಡಾ.ಬಾಬಾಸಾಹೇಬ ಅಂಬೇಡ್ಕರರು ಬರೆದ ಸಂವಿಧಾನವೇ ಕಾರಣ. ಅವರನ್ನು ಈ ಕ್ಷಣದಲ್ಲಿ ಸ್ಮರಿಸುವ ಅಗತ್ಯವಿದೆ.

ಗ್ರಾಮೀಣ ಭಾಗದ ಮಕ್ಕಳು ಪಟ್ಟಣಕ್ಕೆ ಬಂದು ಸ್ನಾತಕ ಸ್ನಾತಕೋತ್ತರ ಪದವಿ ಅಭ್ಯಸಿಸುವಂತಾಗಿದೆ. ನಿಮ್ಮೆಲ್ಲ ಕೈಗಳಲ್ಲಿ ಮೊಬೈಲ್ ಬಂದಿದೆ. ನೀವೆಲ್ಲ ಉತ್ತಮ ಶಿಕ್ಷಣ ಪಡೆಯುವಂತಾಗಿದೆ ಎಂದರೆ ಡಾ.ಅಂಬೇಡ್ಕರರು ಎಲ್ಲಾ ಜಾತಿ ಸಮುದಾಯಗಳಿಗೆ ಸಮರ್ಪಕವಾಗಿ ಮೀಸಲಾತಿ ಒದಗಿಸವು ಮೂಲಕ ಎಲ್ಲರಿಗೂ ಸಮಾನತೆ ಎಲ್ಲರೂ ಸುಶಿಕ್ಷಿತರಾಗಲಿ ಹೆಣ್ಣು ಮಕ್ಕಳಿಗೂ ಸಮಾನ ಶಿಕ್ಷಣ ದೊರೆಯಲಿ ಎಂಬುದಕ್ಕೆ ಅವರು ರಚಿಸಿದ ಸಂವಿಧಾನದಿಂದಲೇ ಇಂದು ನಾವೆಲ್ಲ ಸುಶಿಕ್ಷತರಾಗಿ ಗೌರವದಿಂದ ಬದುಕಲು ಸಾಧ್ಯವಾಗಿದೆ.

ಕಾರಣ ಸಂವಿಧಾನ ನಮ್ಮ ದೇಶದ ದೊಡ್ಡ ಗ್ರಂಥ. ನಾವೆಲ್ಲ ಇತಿಹಾಸವನ್ನು ಓದಬೇಕು. ದೇಶದ ಚರಿತ್ರೆಯನ್ನು ಅರಿಯಬೇಕು. ಓದು ನಿರಂತರ ಅರಿಯುವ ಪ್ರಕ್ರಿಯೆ ನಾವೆಲ್ಲ ನಿತ್ಯ ಕನಿಷ್ಠ 8 ಗಂಟೆಯಾದರೂ ಓದಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ವಿವಿಧ ಕೃತಿಗಳನ್ನು ಓದುವ ಮೂಲಕ ಜ್ಞಾನ ಸಂಪಾದನೆ ಮಾಡಬೇಕು ಎಂದು ತಿಳಿಸಿದರು.

ಸಿಪಿಐ ಹನುಮರಡ್ಡೆಪ್ಪ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಯಾವುದೋ ಒಂದು ಚಟಕ್ಕೆ ಆಕರ್ಷಣೆ ಆಗುವದು ಸಹಜ. ಅದರಿಂದ ಶಿಕ್ಷಣ ಹಾಳಾಗುವದಲ್ಲದೆ ಬದುಕು ಸಹ ಹಾಳಾಗಲಿದೆ. ದಯವಿಟ್ಟು ಓದುವ ಕಡೆ ನಿಮ್ಮ ಗಮನವಿರಲಿ. ಆಕರ್ಷಣೀಯ ದುನಿಯ ಕೇವಲ ಕ್ಷಣಿಕ. ಕೆಟ್ಟ ಚಟಕ್ಕೆ ಬಲಿಯಾಗದ ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಪರಸ್ಪರರು ಸಹೋದರ ಸಹೋದರಿ ಭಾವನೆಯೊಂದಿಗೆ ಅಭ್ಯಾಸ ಮಾಡಿ. ಓದಿನಲ್ಲಿ ಸ್ಪರ್ಧಾ ಮನೋಭಾವನೆ ಇರಲಿ ಎಂದು ಆಶೀಸಿದರು.

ಅಲ್ಲದೆ ಇನ್ಮೇಲೆ ಕಾಲೇಜಿಗೆ ಯಾರೊಬ್ಬರು ಮೊಬೈಲ್ ತರುವಂತಿಲ್ಲ. ನಾಳೆಯಿಂದ ಮೊಬೈಲ್ ಬಳಕೆ ಕಾಲೇಜಿನಲ್ಲಿ ನಿಷೇಧವಿದೆ. ಮೊಬೈಲ್ ಉತ್ತಮ ವಿಷಯಕ್ಕಾಗಿ ಬಳಕೆಯಾಗಲಿ ಕೆಟ್ಟದ್ದಕ್ಕಾಗಿ ಬಳಸಬೇಡಿ ಮುಂದೆ ಅದರ ಪ್ರತಿಕೂಲ ಪರಿಣಾಮ ಹೆದರಿಸಬೇಕಾದಿತು ಎಂದು ಎಚ್ಚರಿಸಿದರು.

ಪ್ರಾಂಶುಪಾಲ ಪ್ರೋ.ವಿ.ಎಂ.ಹಿರೇಮಠ ಅಧ್ಯಕ್ಷತೆವಹಿಸಿದ್ದರು. ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸಹ ಪ್ರಾಧ್ಯಾಪಕಿ ಡಾ.ಮೇಧಾವಿನಿ ರಮೇಶ ಪೋತೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿಪಿಐ ಹನುಮರಡ್ಡೆಪ್ಪ, ನಗರಸಭೆ ಸದಸ್ಯ ಶಿವಕುಮಾರ ತಳವಾರ, ಪತ್ರಕರ್ತ ಮಲ್ಲಿಕಾರ್ಜುನ ಮುದ್ನೂರ ಮಾತನಾಡಿದರು. ಸುರಪುರದ ಪ್ರಭು ಕಾಲೇಜಿನ ಪ್ರಾಂಶುಪಾಲ ಸಂಗಪ್ಪ ಹೊಸಮನಿ, ಕಾಲೇಜಿನ ಸಾಂಸ್ಕøತಿಕ ವಿಭಾಗ ಸಹಾಯಕ ಪ್ರಾಧ್ಯಾಪಕ ಸೂರ್ಯಕಾಂತ ಬಿ.ಉಮ್ಮಾಪುರೆ, ಕ್ರೀಡಾ ವಿಭಾಗದ ಡಾ.ಬಸಂತ ಎನ್.ಸಾಗರ, ರೆಡ್ ಕ್ರಾಸ್ ವಿಭಾಗದ ಡಾ.ಹಯ್ಯಾಳಪ್ಪ ಸುರಪುರಕರ್, ಎನ್ನೆಸ್ಸೆಸ್‍ನ ಡಾ.ರಾಜು ಶಾಮರಾವ ಮತ್ತು ರೋವರ ಆಂಡ್ ರೇಂಜರ್ಸ್‍ಮ ಡಾ.ಸಂತೋಷ ಹುಗ್ಗಿ ಮತ್ತು ಕಾಳಮ್ಮ ಎಚ್.ಎಸ್.ಉಪಸ್ಥಿತರಿದ್ದರು. ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಪ್ರಥಮ ವರ್ಷ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button