ದೈವದತ್ತ ಕಲೆ ಕರುಣಿಸಿದ ಸವಿತಾ ಮಹರ್ಷಿಗಳು – ಗೌನಳ್ಳಿ

ಶ್ರೀ ಸವಿತಾ ಮಹರ್ಷಿಗಳ ಜಯಂತ್ಯುತ್ಸವ
ದೈವದತ್ತ ಕಲೆ ಕರುಣಿಸಿದ ಸವಿತಾ ಮಹರ್ಷಿಗಳು – ಗೌನಳ್ಳಿ
yadgiri,ಶಹಾಪುರ: ಸವಿತಾ ಮಹರ್ಷಿಗಳಿಗೆ ಬ್ರಹ್ಮದೇವರು ಮೂರು ವಿದ್ಯೆಗಳನ್ನು ಕರುಣಿಸಿದು,್ದ ಆಯುಷ್ಕರ್ಮ, ಸಂಗೀತವಿದ್ಯೆ, ಮತ್ತು ಆಯುರ್ವೇದ ಶಾಸ್ತ್ರ ಪ್ರಮುಖವಾಗಿದ್ದು, ಇದರಿಂದ ಸವಿತಾ ಸಮಾಜವು ದೇಶಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದು, ಪರಂಪರೆಗೆ ಮೇಲ್ಪಂಕ್ತಿಯಾಗಿದೆ ಎಂದು ಮುಖಂಡ ವೆಂಕಟೇಶ ಗೌನಳ್ಳಿ ತಿಳಿಸಿದರು.
ನಗರದಲ್ಲಿ ಸವಿತಾ ಸಮಾಜದವತಿಯಿಂದ ಸಮುದಾಯದ ಭವನದಲ್ಲಿ ಆಯೋಜಿಸಿದ್ದ ಶ್ರೀ ಸವಿತಾ ಮಹರ್ಷಿಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಹರ್ಷಿಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಶ್ರೀಮಂತ ವಿದ್ಯೆಗಳನ್ನು ಕರಗತ ಮಾಡಿಕೊಂಡು ಸರ್ವ ಸಮುದಾಯಕ್ಕೂ ಬೇಕಾಗಿರುವ ಸವಿತಾ ಸಮಾಜ ಇಂದು ಎಲ್ಲ ರಂಗದಲ್ಲಿಯೂ ಹಿಂದೆ ಬಿದ್ದಿರುವದು ವಿಷಾದನೀಯವಾಗಿದೆ. ಸರ್ಕಾರ ಸವಿತಾ ಸಮಾಜದ ಆರ್ಥಿಕತೆ, ಸಾಮಾಜಿಕ ಮತ್ತು ರಾಜಕೀಯವಾಗಿ ಬೆಳವಣಿಗೆಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸವಿತಾ ಸಮಾಜದ ಅಧ್ಯಕ್ಷ ರಮೇಶ ದುಗುನೂರಕರ್, ಗೌರವಾಧ್ಯಕ್ಷ ಶಿವಕುಮಾರ ಹುಣಸಿಗಿಡ, ಕಾರ್ಯದರ್ಶಿ ಅಶೋಕ ಹುಣಸಗಿಡ, ಉಪಾಧ್ಯಕ್ಷ ನಾಗರಾಜ ವಠಾರ, ಅಶೋಕ ಕಡಕೋಳ, ಮೌನೇಶ, ವಿಶ್ವನಾಥ, ಚಂದ್ರಕಾಂತ, ಬನ್ನಪ್ಪ, ಶಿವು ಅನವಾರ, ಶ್ರೀನಿವಾಸ ಗೌನಳ್ಳಿ, ಮಲ್ಲಣ್ಣ, ನಾಗಪ್ಪ ಕಿಲನಕೇರಿ ಇತರರಿದ್ದರು.