ಪ್ರಮುಖ ಸುದ್ದಿ
ಕಥೆ ಕೇಳೋಕೆ ಬಂದಿಲ್ಲ ನಾವು ನೀರು ಹರಿಸುವ ನಿರ್ಧಾರಕೈಗೊಳ್ಳಿ ದೇವದುರ್ಗ ಶಾಸಕ ಆವಾಜ್
ಆಲಮಟ್ಟಿಃ ನಿಮ್ಮ ಕಥೆ ಕೇಳೋಕೆ ನಾವು ಇಲ್ಲಿ ಬಂದಿಲ್ಲ. ನೀರು ಬಿಡದಿದ್ದರೆ ರೈತರು ಮುಖ ಉಗಿತಾರೆ. ಮಾ.೩೧ ರವರೆಗೆ ನೀರು ಹರಿಸಬೇಕೆಂದು ದೇವದುರ್ಗ ಶಾಸಕ ಶಿವನಗೌಡ ನಾಯಕ ಖಾರವಾಗಿ ಮಾತನಾಡಿದ ಘಟನೆ ನಡೆದಿದೆ.
ಆಲಮಟ್ಟಿಯಲ್ಲಿ ನಿನ್ನೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಶಾಸಕರು ಜೋರಾಗಿಯೇ ಮಾತನಾಡಿದ್ದಾರೆ.
ನಾರಾಯಣಪುರ ಬಲದಂಡೆ ಕಾಲುವೆಗೆ ಮಾ.25 ರವರೆಗೆ ಅಲ್ಲ ಮಾ.31 ರವರೆಗೂ ನೀರು ಬಿಡಬೇಕೆಂದು ಡಿಸಿಎಂ ಗೋವಿಂದ ಕಾರಜೋಳ ಅವರಿಗೆ, ಅಧಿಕಾರಿಗಳಿಗೆ ಸೂಚಿಸುವಂತೆ ಕೇಳಿದರು.
ಏರು ಧ್ವನಿಯಲ್ಲಿಯೇ ಮಾತನಾಡಿದ. ಶಾಸಕ ಶಿವನಗೌಡ, ನಾರಾಯಣಪುರ ಡ್ಯಾಂನಲ್ಲಿ ಸಾಕಷ್ಟು ನೀರಿದೆ.
ವಾರಬಂದಿಯಿಂದ ಉಪಯೋಗವಿಲ್ಲ. 15 ದಿನ ನಿರಂತರ ನೀರು ಹರಿಬಿಡಬೇಕು.ಬೆಳೆಗಳಿಗೆ ಅಗತ್ಯವಿದ್ದಾಗ ನೀರು ಬಿಡದಿದ್ದರೆ ಬೆಳೆ ಹಾಳಾಗಳಿವೆ ಎಂದು ವಿವರಿಸಿದರು.