ಪ್ರಮುಖ ಸುದ್ದಿ
ಯಾರಾಗ್ತಾರೆ ಕರ್ನಾಟಕ ರಾಜ್ಯದ ರಾಜ್ಯಪಾಲರು?
ಬೆಂಗಳೂರು: ಇದೇ ತಿಂಗಳಲ್ಲಿ ರಾಜ್ಯಪಾಲ ವಜೂಭಾಯ್ ವಾಲಾ ಅವರ ಅಧಿಕಾರವಧಿ ಅಂತ್ಯವಾಗಲಿದ್ದು ಕರ್ನಾಟಕದ ರಾಜ್ಯಪಾಲರು ಯಾರಾಗ್ತಾರೆ ಎಂಬ ಕುತೂಹಲ ಶುರುವಾಗಿದೆ. ಸದ್ಯ ರಾಜ್ಯಪಾಲ ಹುದ್ದೆಯ ರೇಸ್‌ನಲ್ಲಿ ಮೂವರು ಮಹಿಳಾ ನಾಯಕಿಯರ ಹೆಸರು ಹರಿದಾಡುತ್ತಿದೆ. ಉಮಾಭಾರತಿ, ಸುಮಿತ್ರಾ ಮಹಾಜನ್ ಹಾಗೂ ಸುಷ್ಮಾ ಸ್ವರಾಜ್ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ.
ಉಮಾಭಾರತಿ ಅವರು ಹುಬ್ಬಳ್ಳಿ ಈದ್ಗಾ ಮೈದಾನದ ಗಲಾಟೆ ವಿಚಾರದಲ್ಲಿ ಆರೋಪಿ ಆಗಿದ್ದ ಕಾರಣ ಅವರ ಆಯ್ಕೆ ಕಷ್ಟಸಾಧ್ಯ. ಸುಷ್ಮಾ ಸ್ವರಾಜ್ ಅವರು 199ರಲ್ಲಿ ಬಳ್ಳಾರಿಯಿಂದ ಲೋಕಸಭಾ ಚುನಾವಣೆ ಎದುರಿಸಿದ್ದು ರಾಜ್ಯದ ನಾಯಕರ ಜತೆ ನಂಟು ಹೊಂದಿದ್ದಾರೆ. ಇನ್ನು ಸುಮಿತ್ರಾ ಮಹಾಜನ್ ಅವರು ಲೋಕಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು ರಾಜ್ಯಪಾಲರ ಹುದ್ದೆಗೆ ಫಿಟ್ ಎಂಬ ಚರ್ಚೆ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇದೇ ತಿಂಗಳ ಕೊನೆಯಲ್ಲಿ ಕರ್ನಾಟಕದ ನೂತನ ರಾಜ್ಯಪಾಲರ ಘೋಷಣೆ ಆಗಲಿದೆ.