ಆ.5 ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ, ಪ್ರಧಾನಿಯಿಂದ ಬೆಳ್ಳಿ ಇಟ್ಟಂಗಿ ಇರಿಸಿ ಚಾಲನೆ
ನವದೆಹಲಿಃ ಶ್ರೀರಾಮ ಮಂದಿರ ನಿರ್ಮಾಣದ ಕಾರ್ಯಗಳು ಅಯೋಧ್ಯೆಯಲ್ಲಿ ಭರದಿಂದ ನಡೆದಿದ್ದು, ಆಗಸ್ಟ್ 5 ರಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ನಡೆಯುವ ಭೂಮಿ ಪೂಜೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು 40 ಕೆಜಿ ತೂಕದ ಬೆಳ್ಳಿ ಇಟ್ಟಿಗೆಯನ್ನು ಇಡುವ ಮೂಲಕ ಪೂಜೆ ನೆರವೇರಿಸಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ನೃತ್ಯ ಗೋಪಾಲ್ ದಾಸ್ ತಿಳಿಸಿದ್ದಾರೆ.
ಭೂಮಿ ಪೂಜೆ ಮೂರು ದಿನಗಳ ಮುಂಚೆ ಆ.3 ರಂದು ರಾಮಾಚಾರ್ಯ ಪೂಜೆ, ವೇದೋಕ್ತ ಪೂಜಾ ವಿಧಿ ವಿಧಾನ ಜರುಗಲಿದೆ. ಆ.5 ಮದ್ಯಾಹ್ನ 12-15 ಕ್ಕೆ ಮುಖ್ಯ ಭೂಮಿ ಪೂಜೆಗೆ ಮುಹೂರ್ತ ನಿಗದಿಪಡಿಸಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.
ಅಲ್ಲದೆ ಭೂಮಿ ಪೂಜೆಗೆ ವಿಶೇಷವಾಗಿ ಲಾಲಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ ಸೇರಿದಂತೆ ಮಹರಾಷ್ಟರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಸೇರಿದಂತೆ ಬಿಹಾರ ಸಿಎಂ ನಿತೀಶಕುಮಾರ ಮತ್ತು ಬಿಜೆಪಿಯ ಪ್ರಮುಖರು 50 ಮಂದಿ ಗಣ್ಯರಿಗೆ ಆಹ್ವಾನ ನೀಡಲಾಗಿದೆ.
ಭಕ್ತಾಧಿಗಳಿಗೆ ನೇರ ಪ್ರಸಾರ ವೀಕ್ಷಣೆಗೆ ಅಯೋಧ್ಯೆಯಲ್ಲಿ ದೊಡ್ಡ ದೊಡ್ಡ ಟಿವಿ ಪರದೆಗಳನ್ನು ಅಳವಡಿಸಲಾಗುತ್ತಿದೆ. ಗಣ್ಯರಿಗೂ ಸಾಮಾಜಿಕ ಅಂತರ ವ್ಯವಸ್ಥೆ ಮಾಡಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.