ಶಹಾಪುರಃ ಫೆ.4 ರಂದು ನಗರಕ್ಕೆ ಶ್ರೀ ರವಿಶಂಕರ ಗುರೂಜಿ
ಫೆ.4 ರಂದು ಜ್ಞಾನ, ಧ್ಯಾನ ಮಹಾ ಸತ್ಸಂಗ
ಕಾರ್ಯಕ್ರಮದ ಸ್ಥಳಕ್ಕೆ ಶಾಸಕ ದರ್ಶನಾಪುರ ಭೇಟಿ ಪರಿಶೀಲನೆ
ಶಹಾಪುರ: ಇದೇ ಫೆಬ್ರವರಿ 4ರಂದು ನಗರಕ್ಕೆ ಆರ್ಟ್‍ಆಫ್ ಲಿವಿಂಗ್‍ನ ವ್ಯಕ್ತಿವಿಕಾಸ ಕೇಂದ್ರದ ಶ್ರೀಶ್ರೀ ರವಿಶಂಕರ ಗುರೂಜಿ ಅವರು ಆಗಮಿಸಲಿದ್ದು, ಅಂದು ಸಂಜೆ 5:30ಕ್ಕೆ ಜ್ಞಾನ, ಧ್ಯಾನ, ಮಹಾಸತ್ಸಂಗ ಕಾರ್ಯಕ್ರಮ ನಗರದ ಡಿಗ್ರಿ ಕಾಲೇಜು ಹತ್ತಿರದ ಕ್ರೀಡಾಂಗಣದಲ್ಲಿ ಜರುಗಲಿದೆ.
ಈ ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತು ಕಾರ್ಯಕ್ರಮದ ನಡೆಯುವ ಸ್ಥಳಕ್ಕೆ ಶನಿವಾರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಶಾಸಕರು, ಕಾರ್ಯಕ್ರಮದ ವೇದಿಕೆ ವಿದ್ಯುತ್ ಮತ್ತು ಧ್ವನಿವರ್ಧಕ ವ್ಯವಸ್ಥೆ ಮತ್ತು ಮಹಾ ಸತ್ಸಂಗ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲಿದ್ದು ಎಲ್ಲಾ ರೀತಿಯ ವ್ಯವಸ್ಥೆಯಾಗಬೇಕು, ಸ್ವಚ್ಛತೆಯ ಬಗ್ಗೆ ನಗರಸಭೆಯವರಿಗೂ ಸೂಚಿಸಲಾಗಿದೆ.
ಗುರೂಜಿಯವರ ಜೊತೆ ಆಗಮಿಸುವ ಪ್ರಮುಖರಿಗೆ, ಹಿರಿಯರಿಗೂ, ಸೂಕ್ತ ವ್ಯವಸ್ಥೆ ಕಲ್ಪಿಸಬೇಕು, ಕಾರ್ಯಕ್ರಮದ ಯಶಸ್ಸಿಗೆ ಸರ್ವರ ಸಹಕಾರದ ಸದುಪಯೋಗ ಪಡೆಯಿರಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆರ್ಟ್‍ಆಫ್ ಲಿವಿಂಗ್‍ನ ಪ್ರಮುಖರಾದ ಉಜ್ವಲ ಶಂಕರಜೀ ಬೆಂಗಳೂರು, ಹೆಚ್.ಎಸ್.ರೆಡ್ಡಿ, ಶ್ರೀನಿವಾಸ ಸಿಂಧನೂರು, ಅಶೋಕ ಉಪ್ಪಿನ, ಅರವಿಂದ ಉಪ್ಪಿನ, ಸೇರಿದಂತೆ ಇತರರಿದ್ದರು.