ಪ್ರಮುಖ ಸುದ್ದಿ
ಶ್ರೀರಾಮುಲು ಅವರಿಗೆ ಶೀಘ್ರ ದೊಡ್ಡ ಸ್ಥಾನ- ಸವದಿ
ಶ್ರೀರಾಮುಲುಗೆ ಶೀಘ್ರದಲ್ಲಿ ದೊಡ್ಡ ಸ್ಥಾನಮಾನ ಸಿಗಲಿದೆ- ಡಿಸಿಎಂ ಸವದಿ
ಕೊಪ್ಪಳಃ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಮುಂದೆ ದೊಡ್ಡ ಸ್ಥಾನಮಾನದ ಜವಬ್ದಾರಿ ಸಿಗಲಿದ್ದು, ಯಾರೂ ಅಸಮಾಧಾನ ಪಡುವ ಅಗತ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅವರಿಗೆ ಡಿಸಿಎಂ ಜೊತೆಗೆ ಇನ್ನೂ ಪ್ರಬಲ ಖಾತೆಯು ದೊರೆಯಬಹುದು.
ಕೊಪ್ಪಳ ಜಿಲ್ಲಾ ಉಸ್ತುವಾರಿ ನೀಡಿದ್ದಕ್ಕೆ ಸಂತಸ ತಂದಿದೆ. ಈ ಹಿಂದೆಯೂ ನಾನು ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿರುವ ಅನುಭವ ನನಗಿದೆ.
ಈಗ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಉಸ್ತುವಾರಿ ಜವಬ್ದಾರಿ ಹೊತ್ತಿದ್ದು, ಈ ಭಾಗದ ಅಭಿವೃದ್ಧಿ ಗೆ ಪ್ರಯತ್ನಿಸುತ್ತೇನೆ ಎಂದರು.
ಅಲ್ಲದೆ ಹೊಸ ಮೋಟಾರು ವಾಹನ ಕಾಯ್ದೆ ದಂಡದ ಪ್ರಮಾಣ ಕುರಿತು ಹಲವಾರು ರಾಜ್ಯಗಳಿಂದ ವರದಿ ತರಿಸಿಕೊಳ್ಳಲಾಗಿದ್ದು, ಪರಿಶೀಲಿಸಿ ರಾಜ್ಯ ಹೊಸ ಮೋಟಾರು ವಾಹನ ಕಾಯ್ದೆಗೆ ಸೂಕ್ತ ತಿದ್ದು ಮಾಡಲಾಗುವದು ಎಂದು ತಿಳಿಸಿದರು.