ಪ್ರಮುಖ ಸುದ್ದಿ
HDK ಹತ್ರ ಗಂಭೀರತೆ ಇಲ್ಲ ಶ್ರೀರಾಮುಲು ಮಾತು
ಸಮಾಜಘಾತಕ ಶಕ್ತಿ ಮಟ್ಟ ಹಾಕಬೇಕು – ಶ್ರೀರಾಮುಲು
ಮೈಸೂರಃ ಸಮಾಜಘಾತುಕ ಶಕ್ತಿ ಬೆಳೆಯಲು ಬಿಡಬಾರದು. ಅಂತಹ ದುಷ್ಟ ಶಕ್ತಿಯನ್ನ ಮಟ್ಟ ಹಾಕಬೇಕು. ಶೋಕಿ, ಪ್ರಚಾರಕ್ಕಾಗಿ ಹೀನ ಕೃತ್ಯ ಎಸಗುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.
ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಯಾವುದೇ ವಿಷಯ ಕುರಿತು ಮಾತನಾಡುವಾಗ ಅದರ ಗಂಭೀರತೆ ಅರಿತು ಮಾತನಾಡುವದನ್ನು ಕಲಿಯಬೇಕು.
ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೇಲಿ ಮಾಡಿರುವದು ಸರಿಯಲ್ಲ. ಈ ಹಿಂದೆ ಸೈನಿಕರ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಗಂಭೀರತೆ ಎನ್ನುವದು ಕುಮಾರಸ್ವಾಮಿ ಅವರಿಗೆ ಇಲ್ಲ. ಮುಖ್ಯಮಂತ್ರಿಯಾದವರು, ಮಾಜಿ ಪ್ರಧಾನಿಗಳ ಮಗ ಯಾವ ವಿಷಯ ಹೇಳಿಕೆ ನೀಡುವಾಗ ಎಚ್ಚರಿಕೆ ಇರಬೇಕು ಎಂದು ಕಿವಿ ಮಾತು ಹೇಳಿದರು.