ಪ್ರಮುಖ ಸುದ್ದಿ
ಪಕ್ಷಕ್ಕಾಗಿ ರಾಜಕಾರಣ ಮಾಡ್ತಿರುವೆ- ಶ್ರೀರಾಮುಲು
ಆಸೆ ಎಲ್ಲರಿಗೂ ಇರುತ್ತೆಃ ಶ್ರೀರಾಮುಲು
ಬೆಂಗಳೂರಃ ಪಕ್ಷ ಯಾವುದೇ ಜವಬ್ದಾರಿ ನೀಡಿದರೂ ನಾನು ನಿಭಾಯಿಸುವೆ. ನಾನು ಸಿಎಂ ಸಂಪರ್ಕದಲ್ಲಿದ್ದೇನೆ. ಮೊನ್ನೆ ಮಾಧ್ಯಮದಲ್ಲಿ ಸಿಎಂ ಜತೆ ಶ್ರೀರಾಮುಲು ಮುನಿಸು ಎಂದು ದೊಡ್ಡ ಸುದ್ದಿಯಾಗಿದೆ ಅದೆಲ್ಲ ಏನು ಇಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟ ಪಡಿಸಿದರು.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸುದ್ದಿಗಾರರು ಕೇಳಿದ ರಮೇಶ ಜಾರಕಿಹೊಳಿ ಅವರಿಗೆ ಡಿಸಿಎಂ ಸ್ಥಾನ ವಿಚಾರದ ಬಗ್ಗೆ ನಾನೇನು ಹೇಳಲ್ಲ ಹೈಕಮಾಂಡಗೆ ಬಿಟ್ಟ ವಿಚಾರ ನನಗೆ ಪಕ್ಷ ಏನ್ ಜವಬ್ದಾರಿವಹಿಸುತ್ತಾರೆ ಅದನ್ನು ಪಾಲಿಸುತ್ತೇನೆ.
ನಾನು ಪಕ್ಷಕ್ಕಾಗಿ ರಾಜಕಾರಣ ಮಾಡುತ್ತಾ ಬಂದಿದ್ದೇನೆ. ಪಕ್ಷದ ಬೆಳವಣಿಗೆಗೆ ಶ್ರಮಿಸುವೆ. ಎಂದಿಗೂ ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡುವದಿಲ್ಲ ಎಂದರು.