ಪ್ರಮುಖ ಸುದ್ದಿ
‘ವೀರಶೈವ’ ಇತ್ತೀಚೆಗೆ ಸೇರಿದ್ದು, ‘ಲಿಂಗಾಯತ’ ಸ್ವತಂತ್ರ ಧರ್ಮವಾಗಲಿ ಅಂದರಂತೆ ಸಿದ್ಧಗಂಗಾಶ್ರೀ
ಬೆಂಗಳೂರು: ‘ಲಿಂಗಾಯತ’ ಸ್ವತಂತ್ರ ಧರ್ಮವಾಗಲಿ . ವೀರಶೈವ ಇತ್ತೀಚೆಗೆ ಸೇರಿಕೊಂಡಿದ್ದು ಎಂದು ತುಮಕೂರಿನ ಸಿದ್ದಗಂಗಾ ಮಠದ ಡಾ.ಶಿವಕುಮಾರ ಶ್ರೀಗಳು ತಿಳಿಸಿದ್ದಾರೆ ಎಂದು ಬೆಂಗಳೂರಿನಲ್ಲಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ನಮ್ಮಲ್ಲಿದ್ದ ಅಳಕು, ಅನುಮಾನಗಳಿನ್ನು ದೂರ ಆಗಿವೆ. ಈ ಬಗ್ಗೆ ಯಾವ ಬುದ್ಧಿಜೀವಿಗಳ ಮಾರ್ಗದರ್ಶನ, ಹೇಳಿಕೆ ಬಗ್ಗೆ ನಾವಿನ್ನು ಚಿಂತಿಸಲ್ಲ. ಸಿದ್ಧಗಂಗಾ ಶ್ರೀಗಳು ಹೇಳಿದ್ದೇ ಸುಪ್ರೀಂ ಎಂದು ಅವರು ಹೇಳಿದರು.
ಇಂದು ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದ ವೇಳೆ ಶ್ರೀಗಳು ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಬೇಕು ಎಂದು ತಿಳಿಸಿದ್ದಾರೆ. ಹೀಗಾಗಿ, ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೋರಾಟ ತೀವ್ರಗೊಳಿಸುತ್ತೇವೆ. ಬಸವ ಧರ್ಮ ಸ್ಥಾಪನೆಗೆ ನಾವೆಲ್ಲ ಶ್ರಮಿಸುತ್ತೇವೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.