ಸಿದ್ಧಲಿಂಗೇಶ್ವರ ಬೆಟ್ಟದಲ್ಲಿ ಶ್ರಾವಣ ಸಂಪನ್ನ
ಸಿದ್ಧಲಿಂಗೇಶ್ವರ ಬೆಟ್ಟದಲ್ಲಿ ಶ್ರಾವಣ ಮುಕ್ತಾಯಃ ವನಭೋಜನ
ಶಹಾಪುರಃ ನಗರದ ಬೆಟ್ಟದ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕೊನೆಯ ವಾರದಂಗವಾಗಿ ರವಿವಾರ ಶೀಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಅಲ್ಲದೆ ವಿಶೇಷವಾಗಿ ಭಕ್ತಾಧಿಗಳಿಗೆ ವನ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು. ಶ್ರಾವಣ ಸಂಪನ್ನ ಅಂಗವಾಗಿ ಶ್ರೀಸಿದ್ಧಲಿಂಗೇಶ್ವರರ ಮೂಲ ಪ್ರತಿಮೆಗೆ ವಿಶೇಷ ಅಭಿಷೇಕ, ಪೂಜೆ ಹೂವಿನ ಅಲಂಕಾರ ನೆರವೇರಿಸಲಾಗಿತ್ತು.
ಭಕ್ತಾಧಿಗಳು ಬೆಳಗ್ಗೆಯಿಂದಲೇ ಶ್ರೀದೇವರ ದರ್ಶನ ಪಡೆದು ಪುನೀತರಾದರು.
ವನ ಭೋಜನದಲ್ಲಿ ಮಾದ್ಲಿ, ಕಟಿರೊಟ್ಟಿ, ಪುಂಡ್ಯಾಪಲ್ಯಾ, ಕಾಳು ಪಲ್ಯೆ ಸೇಂಗಾ ಚಟ್ನಿ, ಅನ್ನ ಸಾಂಬಾರುಮ ಚಿತ್ರಾನ್ನ ಮತ್ತು ಮಜ್ಜಿಗೆ ಸವಿದರು. ಶ್ರೀಮಠದ ಪಶುಪತಿರುದ್ರ ಸ್ವಾಮೀಜಿಯ ಆಶೀರ್ವಾದ ಪಡೆದರು. ಕಾರ್ಯಕ್ರಮದಲ್ಲಿ ಅಪಾರ ಭಕ್ತ ಸಮೂಹ ಭಾಗವಹಿಸಿ ಪ್ರಸಾದ ಸೇವಿಸಿದರು.
ಇದೇ ಸಂದರ್ಭದಲ್ಲಿ ಸಮಾಜದಲ್ಲಿ ಅಪಾರ ಸೇವೆ ಸಲ್ಲಿಸುತ್ತಿರುವ ಅಮ್ಮ ಕ್ಯಾಂಟೀನ್ ಮಾಲೀಕ ಗುರು ಮಣಿಕಂಠ ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗಂಗಾಧರ ಸ್ವಾಮೀಜಿ, ಉಪನ್ಯಾಸಕ ಧರ್ಮಣ್ಣ ಬಡಿಗೇರ, ರಮೇಶ ನಗನೂರ, ಮಲ್ಲಿಕಾರ್ಜುನ ಚಿಲ್ಲಾಳ, ಬಿ.ಎಸ್.ರಡ್ಡಿ, ಅರವಿಂದ ಟೆಲ್ಲೂರ ಸೇರಿದಂತೆ ಇತರರಿದ್ದರು.