ಮನಸ್ಸಿನಿಂದ ಬದುಕಲ್ಲ.. ಜಗತ್ತನ್ನೆ ಕಟ್ಟಬೇಕುಃ ಜ್ಞಾನಯೋಗಿ ಸಿದ್ದೇಶ್ವರ ಶ್ರೀ
ಮನಸ್ಸು ಅಪರೂಪದ ಸಾಧನಃ ಸಿದ್ದೇಶ್ವರ ಶ್ರೀವಾಣಿ
ಕಲಬುರ್ಗಿಯಲ್ಲಿ ನಡೆಯುತ್ತಿರುವ ಶ್ರೀಗಳ ಪ್ರವಚನಃ ರವಿವಾರದ ಆಯ್ದ ಭಾಗ
ಕಲಬುರ್ಗಿಃ ಮನಸ್ಸಿನ ಮೇಲೆ ನಮ್ಮೆಲ್ಲ ಜೀವನದ ವೈಭವ ಅವಲಂಬಿಸಿದೆ. ನಮ್ಮ ಮನಸ್ಸು ಶ್ರೀಮಂತವಾಯಿತು. ಬದುಕು ಶ್ರೀಮಂತವಾಯಿತು. ಮನಸ್ಸು ಬಡವಾಗಿದ್ದರೆ, ಬದುಕು ಬಡವಾಗಲಿದೆ. ಅಂತಹ ಮನಸ್ಸನ್ನು ಸುಂದರಗೊಳಿಸುವುದು ಅಷ್ಟೆ ಅವಶ್ಯ. ಜಗತ್ತಿನ ಅನೇಕ ಜನ ಮಹಾನುಭಾವರು ತಮ್ಮ ಬದುಕನ್ನ ಅವರು ಪರಿಪೂರ್ಣಗೊಳಿಸಿಕೊಂಡರು. ಸುಂದರಗೊಳಿಸಕೊಂಡರು. ಅದೆಲ್ಲ ಮನಸ್ಸಿನ ಸಾಧನೆ. ಇದೊಂದು ಅಪರೂಪದ ಸಾಧನ ನಮ್ಮ ಕೈಗೆ ದೊರೆತ ಸಾಧನ. ಇದನ್ನು ನೋಡಲಿಕ್ಕೆ ಆಗುವದಿಲ್ಲ. ಆದರೆ ಆ ಮನಸ್ಸಿಲ್ಲದೆ ಏನು ಮಾಡಲಿಕ್ಕೂ ಆಗಲ್ಲ.
ದೇಹ ನಮಗೆ ಕಾಣಿಸುತ್ತಿದೆ. ಆದರೆ ಮನಸ್ಸು ಕಾಣುವದಿಲ್ಲ. ಅದಕೊಂದು ಬಣ್ಣ, ಅದಕ್ಕೊಂದು ನಿಶ್ಚಿತ ಆಕಾರ ಅದಕ್ಕೊಂದು ಸ್ಥಾನ ಏನದ.. ನನ್ನ ಮನಸ್ಸು ಕಪ್ಪು, ಕೆಂಪು ಅದ ಅಂತಹ ಎಲ್ಲೆದ..ನನ್ನ ಮನಸ್ಸು ಆಕಾರ ಹೀಗದ ಹಾಗದ..ಅಂತಹ ಎಲ್ಲೆದ.. ಅಷ್ಟು ಸೂಕ್ಷ್ಮ ಮನಸ್ಸು. ಮನಸ್ಸನ್ನ ಬಳಸಿ ಬಳಸಿ ಅನುಭವಗಳನ್ನೆಲ್ಲ ನಾವು ಪಡೆಯೋದದ.. ಆ ಅನುಭಗಳೇ ಬದುಕನ್ನ ಅದ್ಭುತ ಗೊಳಿಸ್ತದ. ಅನುಭವದ ಶ್ರೀಮಂತಿಕೆ ಜೀವನದ ಶ್ರೀಮಂತಿಕೆ. ಅನುಭವದ ವೈಭವ ಜೀವನದ ವೈಭವ. ಇಂತಹ ಅನುಭವಕ್ಕೆ ಕಾರಣ ಮನೆ.
ಇಂತಹ ಒಂದು ಮನಸ್ಸನ್ನ ನಾವು ಬಳಸೋದದ. ಎಂತಹ ಶಕ್ತಿಗಳದಾವ ಮನಸ್ಸಿನ ಮಧ್ಯ. ದೇಹದ ಶಕ್ತಿಗಳು ಬಹಳ ಕಡಿಮೆ. ನನ್ನ ಕೈಯಲ್ಲಿ ಶಕ್ತಿ ಎಷ್ಟ ಅದ. ಒಂದು ಕಲ್ಲಿನಲ್ಲಿ ಒಂದು ಮೂರ್ತಿಯನ್ನು ಕೆತ್ತಬಹುದು. ಕಣ್ಣಿನಲ್ಲಿ ಸಾಮರ್ಥ್ಯ ಅದ ನೋಡಬಹುದು. ಕಿವಿಯಲ್ಲಿ ಸಾಮರ್ಥ್ಯ ಅದ ಕೇಳಬಹುದು. ಆದರೆ ಮನಸ್ಸಿನ ಸಾಮರ್ಥ್ಯ ಅಗಾಧ ಅದ. ಮನಸ್ಸಿಲ್ಲ ಕಣ್ಣು ನೋಡುವದಿಲ್ಲ. ಮನಸ್ಸಿಲ್ಲ ಕಿವಿ ಕೇಳುವದಿಲ್ಲ. ಮನಸ್ಸೆ ಇಲ್ಲಾಂದ ಬಳಿಕ ದೇಹ ಕೆಲಸವೇ ಮಾಡುವದಿಲ್ಲ. ಎಷ್ಟು ಅದ್ಭುತವಾದ ಸಾಧನ.
ಜಗತ್ತು ಅಷ್ಟು ರಹಸ್ಯಮಯ ಅನ್ನುವದಕ್ಕ ಇದ ಕಾರಣ.. ಮನಸ್ಸು ಅಂತಹ ಅದ್ಭುತವಾಗಿದೆ. ಎಂದು ಈ ಜಗತ್ತಿಗೆ ನಾವು ಬರ್ತೀವಿ ಅಂದೆ ದೇಹದ ಒಂದೇ ಒಂದು ಮನಸ್ಸು. ದೇಹ ಬೆಳೆತದ ಬೆಳತದ ಮುಪ್ಪು ಹಾಕ್ತಾದ ಆದರೆ ಮನಸ್ಸು ಮಾತ್ರ ಹಾಗೇ ಹರಿತ ಹರಿತ ಇರ್ತದ ಕೆಲಸ ಮಾಡಕೋತ ಇರ್ತದ. ದೇಹದ ಮೇಲೆ ಕಾಲದ ಪ್ರಭಾವ ಮನಸ್ಸಿನ ಮೇಲೆ ಹಾಗಬಹುದು ಹಾಗದೇ ಇರಬಹುದು. ಅಷ್ಟು ಅದ್ಭುತವಾದ ಮನಸ್ಸು. ಇಂತಹ ಮನಸ್ಸನ್ನ ನಾವುಬಳಸೋದದ ಅದು ಜೀವನವನ್ನು ಸುಗಂಧಿತಗೊಳಿಸ್ತದ ನಾವು ಚನ್ನಾಗಿ ಬಳಸಿದ್ರೆ..ಇಲ್ಲವೆ ಬದುಕ ದುರ್ಗಂಧವಾಗಿಸ್ತದ.
ಜೀವನದ ಕಥೆ ಅಂದ್ರೆ ಏನು.? ಮನುಕುಲದ ಕಥೆ ಅಂದ್ರೆ ಮನಸ್ಸಿನ ಕಥೆ ರಾಮಾಯಣ, ಮಹಾಭಾರತ ಇತಿಹಾಸ ಘಟನೆಗಳು. ಎಲ್ಲೆ ನೋಡಿ ಕಾಮದ ಕಥೆ. ಲೋಭದ ಕಥೆ ಮನಸ್ಸಿನ ಭಾವಗಳು. ಇತಿಹಾಸ ನಿರ್ಮಾಣವಾಗುವುದು ಈ ಮನಸ್ಸಿನ ಅಭಿಲಾಷೆಗಳು, ಮನಸ್ಸಿನ ಬಯಕೆಗಳು, ಮನಸ್ಸಿನ ಆಶೋತ್ತರಗಳು. ಇಡಿ ಇತಿಹಾಸವನ್ನ ರೂಪಿಸ್ತಾ ರೂಪಿಸ್ತಾ ಹೋದ್ರು. ಗೆಲ್ಲಬೇಕೆನ್ಸ್ತು ಜಗತ್ತಿನಲ್ಲಿ ನಾನೇ ಶ್ರೇಷ್ಠ ರಾಜನಾಗಬೇಕು ಅನ್ಸುತ್. ಯುದ್ಧಗಳು ಆದದ್ದು ಎದಕ್ ಹೋರಾಟ ನಡೆಯವುದೆದಕೆ ಎಲ್ಲವೂ ಮನಸ್ಸಿನ ಮೇಲೆ ಅವಲಂಬಿತಗೊಂಡಿದೆ.
ಮನಸ್ಸನ್ನ ಉಪೇಕ್ಷೆ ಮಾಡಬಾರದು. ದೇಹವನ್ನು ಹೇಗೆ ಸಿಂಗರಿಸಿಕೊಳ್ಳುತ್ತೇವೆ ಅದಕ್ಕಿಂತ ಮನಸ್ಸಿನ ಮೇಲೆ ಕಾಳಜಿ ಇರಬೇಕು. ನನ್ನ ಮನಸ್ಸು ಸುಗಂಧಿತವಾಗಿರಲಿ. ಸುಗಂಧಿತಗೊಳಿಸಿಕೊಳ್ಳಬೇಕು. ಆಗ ಎಲ್ಲಾ ಕಾರ್ಯಗಳು ಸುಗಂಧಿತವಾಗಿರ್ತವ. ಜೀವನ ಎಲ್ಲಾ ವ್ಯಸನಕ್ಕೆ ಕಾರಣವಾದ ಈ ಮನಸ್ಸನ್ನು ಉಪೇಕ್ಷಿಸಬಾರದು. ಎಲ್ಲದಕ್ಕೂ ನಮ್ಮ ಮನಸ್ಸು ಕಾರಣ. ನಾವು ಆಕಾಶಕ್ಕೆ ಏರಬೇಕೆಂದು ಇಚ್ಛೆ ಪಟ್ರೆ ಮನಸ್ಸು ನಮಗೆ ಪ್ರೇರಣೆ ಕೊಡ್ತದ. ಮನಸ್ಸು ಅಶಕ್ತವಾಗಬಾರದು. ಮನಸ್ಸಿನ ಆಸೆಗಳು ಎಷ್ಟು ಚನ್ನಾಗಿರ್ತಾವ ಜೀವನ ಅಷ್ಟು ಸುಂದರವಾಗಿರ್ತದ. ಮನಸ್ಸು ದುರ್ಬಲವಾಗಬಾರದು. ಇದು ಆಗುವದಿಲ್ಲ ಅಂತ ಅಲ್ಲ. ಮನಸ್ಸಿಗೆ ಎಲ್ಲವನ್ನು ಮಾಡುವ ಸಾಮಥ್ರ್ಯವಿದೆ ಎಂದು ಪತಂಜಲಿ ಮಹರ್ಷಿಗಳ ಕುರಿತು ಉದಾಹರಿಸಿದರು.