ಕುದುರೆ, ಕತ್ತೆ ಕಥೆ, ತೃಪ್ತಿ ಕುರಿತು ಹಲವು ಲೆಕ್ಕಾಚಾರ-ಸಿದ್ದೇಶ್ವರ ಶ್ರೀವಾಣಿ
ಕಲಬುರ್ಗಿಯಲ್ಲಿ ನಡೆಯುತ್ತಿರುವ ಸಿದ್ದೇಶ್ವರಶ್ರೀ ಪ್ರವಚನ
ಶುಕ್ರವಾರ ಪ್ರವಚನದ ಶ್ರೀಅಮೃತ ವಾಣಿ
ಕಲಬುರ್ಗಿಃ ಸಂತೋಷ ಎನ್ನುವ ಅಂಶವಿಲ್ಲದೆ ಹೋದರೆ. ತಿಳಿದಿದ್ದಾರು ಉಪಯೋಗವೇನು. ಸುಂದರವಾದ ತೋಟದಲ್ಲಿ ಏನ್ ಹೂಗಳು ಏನ್ ಹಣ್ಣುಗಳು. ಇಂತಹ ಒಂದು ತೋಟದಲ್ಲಿ ಒಬ್ಬ ಮನುಷ್ಯ ಪ್ರವೇಶ ಮಾಡ್ತಾನೆ. ತೋಟದಲ್ಲಿ ಎಷ್ಟು ಗಿಡಗಳಿವೆ, ಎಷ್ಟು ಹೂಗಳ ಗಿಡಗಳಿವೆ. ಹಣ್ಣಿನ ಮರಗಳೆಷ್ಟಿವೆ ಎಂದು ಎಣಿಕೆ ಮಾಡಿದ. ಇನ್ನೊಬ್ಬ ಬರ್ತಾನೆ ಅಂವ ಈ ಹೂವಿನ ಗಿಡ ಎಷ್ಟಕ್ಕೆ ಮಾರಾಟವಾಗಬಹುದು. ಆ ಗಿಡದ ಬೆಲೆ ಎಷ್ಟು. ಈ ಹಣ್ಣುಗಳಿಂದ ಎಷ್ಟು ಲಾಭ. ಈ ತೋಟ ಮಾರಿದರೆ ಎಷ್ಟು ಹಣ ಬಂದೀತು ಎಂದು ಲೆಕ್ಕ ಹಾಕಿದ. ಅಂದ್ರ ಒಬ್ಬ ಎಣಿಕೆ ಮಾಡವ ಇನ್ನೊಬ್ಬ ಗಳಿಕೆ ಮಾಡವ, ಆದರೆ ಒಬ್ಬರೂ ಸುಂದರ ತೋಟ ನೋಡಿ ಅನುಭವಿಸಲಿಲ್ಲ.
ಇನ್ನೊಬ್ಬ ಖದೀಮ ಬರ್ತಾನೆ ಸುಂದರ ತೋಟ ನೋಡಿದ, ಎಣಿಸಲಿಲ್ಲ. ಗಳಿಕೆ ಲೆಕ್ಕ ಮಾಡಲಿಲ್ಲ. ಏನ್ ಸುಂದರ ತೋಟ ಏನ್ ಇದು ಎಂದು ಆನಂದಪಟ್ಟ. ಖುಷಿಪಟ್ಟ ಏನ್ ಹೂಗಳು ಏನ್ ಸುಂದರ ತೋಟವಿದು ಎಂದು ಆತನ ಹೃದಯದಲ್ಲಿ ಸಂತೋಷವನ್ನು ತುಂಬಿಕೊಂಡ, ಅನುಭವಿಸಿದ, ತೋಟ ನೋಡಿ ಆನಂದ ಮಾಡಿದ, ತನ್ನ ಹೃದಯವನ್ನು ಹದಗೊಳಿಸಿದ, ಮಧುರ ಆನಂದ ಪಟ್ಟ. ಹೃದಯ ಹಸಿರು ಹಸಿರು ಆಗಿ ಇದ್ರ, ನಮ್ಮ ಸುತ್ತಲಿರುವ ಜಗ್ಗತೇ ಸ್ವರ್ಗ. ಜಗತ್ತನ್ನು ನೋಡಿ ಆನಂದ ಪಟ್ಟಿದ್ದೀವಿ. ಈ ಜೀವ ಜಗತ್ತನ್ನು ನೋಡಿ ಅದ್ಭುತ ಆನಂದವನ್ನು ಅನುಭವಿಸುವದು ಯಾವುದಾದ್ರೂ ಇದ್ರ ಅದು ಎದೆಯೊಳಗಿರುವ ಭಾವ. ಅದು ಪವಿತ್ರ ಆಯಿತು ಅದೇ ಭಕ್ತಿ. ಇಂತಹ ಜಗತ್ತನ್ನು ನಿರ್ಮಿಸುವಲ್ಲಿ ಏನೋ ಒಂದು ಅದ್ಭುತವಾದ ಶಕ್ತಿ ಅದ ಅಂತ ಅನ್ಕೊಂಡ್ರೆ ಅದೇ ಭಕ್ತಿ. ಈ ಭಾವವೇ ಬದುಕನ್ನ ಮಧುರ ಮಧುರ ಮಾಡುವುದು.
ಕಣ್ಣು ಕಾಣದ್ದನ್ನ ಬುದ್ಧಿ ಹರಿಯದನ್ನ ಹೃದಯ ಭಾವ ಅನುಭವಿಸುತ್ತದೆ. ದೇವರಾಗಲಿ, ಇಗತ್ತಿನ ಹಿನ್ನೆಲೆಯಾಗಲಿ, ತತ್ವವಾಗಲಿ ಕಣ್ಣಿಗೆ ಕಾಣುವದಿಲ್ಲ. ಹೃದಯಕ್ಕೆ ಗೊತ್ತದ ಅದು ಅನುಭವಿಸುತ್ತದೆ. ಇದೇನು ಸಾಮಾನ್ಯ ಜಗತ್ತೇನು.? ಹೃದಯ ಅನುಭವಿಸುತ್ತದೆ ಅನುಭವಿಸಬೇಕು ಅಷ್ಟೆ. ನಮ್ಮ ಮನೆ ನಮಗೆ ಎಷ್ಟೊಂದು ಚನ್ನ. ಗುಡಿಸಲಾದರೂ ಸರಿ ಎಷ್ಟೊಂದು ಚಂದ್ ಅದ. ಸ್ವಚ್ಛ ಅದ. ಶುದ್ಧವಾದ ಭಾವ ಪರಿದ್ರವಾದ ಭಾವ ಬಹಳ ಚಂದ್ ಅದ. ವ್ಯಕ್ತಿಯಿಂದ ಶ್ರೀಮಂತಿಕೆ ಬೇರೆ, ಭಾವದಿಂದ ಶ್ರೀಮಂತವಾಗುವುದು ಬೇರೆ.
ಕುದರೆಯ ವೈಭವ ಕತ್ತೆಗೆ ಬರುವದಿಲ್ಲ. ಒಂದು ದಿನ ಸುಂದರ ಕುದುರೆ ಮಹಾರಾಜನ ಕಣ್ಣಿಗೆ ಬಿತ್ತು. ಕುದುರೆ ಮಹಾರಾಜನ ಹತ್ತಿರವಿದೆ ಎಂದ ಮೇಲೆ ಎಲ್ಲರೂ ಅದನ್ನ ಬೆಳೆಸೋದು ಅದರ ಮೈಮೇಲೆ ತಿಕ್ಕಿ ತೀಡಿ ಸುಂದರಗೊಳಿಸುವ ಪ್ರೀತಿ ತೋರುವರು ಯಾಕೆ ಅದು ರಾಜನ ಕುದುರೆ. ಅದಕ್ಕೆ ಆಹಾರ ಉಪಚಾರ ಬಲು ಜೋರು ಅದು ರಾಜಅಶ್ವ ಆ ಕಾರಣಕ್ಕೆ ಅದು ರಾಜ ಕುದುರೆಯಾಗಿತ್ತು.
ಒಂದು ದಿನ ಜೊತೆಯಾಗಿದ್ದ ಕತ್ತೆಯನ್ನು ಕಂಡು ನೀನು ಬಾ ನಿನಗೆ ನಮ್ಮ ರಾಜನಿಗೆ ಹೇಳಿ ನಿನಗೆ ಉತ್ತಮ ಆಹಾರ ಇತರೆ ವ್ಯವಸ್ಥೆ ಮಾಡಿಸುವೆ ಎಂದಿತು.
ಆಗ ಕತ್ತೆ ಕೇಳಿತ್ತು ರಾಜಶ್ವಕ್ಕೆ, ನಿನ್ನ ಕೊರಳಲಿ ಕಟ್ಟಿರುವದೇನು ನಿನ್ನ ಕಣ್ಣಿಗೆ ಕಟ್ಟಿದ ಆ ಪಟಟಿಗಳು ಏತಕೆ.? ಆ ಮೇಳೆ ನಿನ್ನ ಬೆನ್ನ ಮೇಲೆ ಇದೆಯಲ್ಲ ಅದೇನು ಎಂದು ಕೇಳಿತು.? ಆಗ ಅದು ಬಿಡು ನಮ್ಮ ರಾಜ ಕುಳಿತುಕೊಳ್ಳಲು ಕಟ್ಟಿದ್ದಾರೆ ಅಂದಿತು ರಾಜ ಅಶ್ವ.
ಆಗ ಕತ್ತೆ ಅಂದಿತು.ಬೇಡಪಾ ನಿನ್ನ ರಾಜಮರ್ಯಾದೆ. ನಾನು ಇಲ್ಲಿ ಸ್ವಾತಂತ್ರ್ಯವಾಗಿ ಇದ್ದೀನಿ. ನನ್ನ ಬೇಕಾದಷ್ಟು ತಿಂದ್ಕೊಂಡು. ತಿರಗ್ತೀನಿ. ಎಲ್ಲಿಗೆ ಬೇಕು ಅಲ್ಲಿಗೆ ಹೋಗ್ತೀನಿ. ಯಾರುಒಬ್ಬರು ನನ್ನ ಮುಟ್ಟಲ್ಲ. ಮುಟ್ಟಿದರೂ ಮೈತೊಳೆದುಕೊಳ್ಳಬೇಕು ಯಾಕಂದ್ರ ನಾನು ಕತ್ತೆ ಎಂದು ಹೇಲಿದ್ದೀನಿ ಹೀಗಾಗಿ ಯಾರು ನನ್ನನ್ನ ಮುಟ್ಟಲ್ಲ. ನಾನು ಆರಾಮವಾಗಿದ್ದೀನಿ.
ನೀನು ಬಾ ಆರಾಮವಾಗಿರಬೇಕು ನಿನಗಿಷ್ಟ ಬಂದಂತೆ ಅಂದಿತು. ನಾನು ಯಾರ ಗುಲಾಮನಾಗಿಲ್ಲ ಎಂದಿತು ಕತ್ತೆ. ಆಗ ಆ ಕುದುರೆ ಕಣ್ಣಲ್ಲಿ ಕಣ್ಣೀರು ಬಂದಿತು. ನಾನು ಹೇಗೆ ಬಿಟ್ಟು ಬರಲಿ, ಇಷ್ಟೆಲ್ಲ ಮಾಡಿದ್ದಾರೆ. ಹೌದು ನೀನು ನನ್ನ ಜೊತೆ ಇದ್ದದ್ದನ್ನು ಅವರು ನೋಡಿದ್ರೆ ಮತ್ತು ನನಗೂ ನಿನ್ನ ಗತಿ ಬಂದಿತು ನಿನ್ನ ಗೆಳೆಯತನ ಬೇಡ ಎಂದಿತು ಕತ್ತೆ. ಅಂದ್ರೆ ಕತ್ತರ ಸಂತೃಪ್ತವಾಗಿದೆ.
ಇಷ್ಟೆ ಅದ ಇಲ್ಲಿ ನಮ್ಮ ಎದೆಯೊಳಗಿದೆಯಲ್ಲ ಸಂತೃಪ್ತಿ ಎನ್ನುವುದು ಬಹು ಮುಖ್ಯ ಅದು ಸಂತೃಪ್ತಿ ಯಾವಾಗ ಬರುತ್ತದೆ. ನಮ್ಮ ಎದೆಯೊಳಗೆ ಭಕ್ತಿ ತುಂಬಿದಲ್ಲಿ ತೃಪ್ತಿ ಸಂತೃಪ್ತಿ ಬರುತ್ತದೆ. ಮನುಷ್ಯನಲ್ಲಿ ಸಂತೃಪ್ತಿ ಕಾಣುವುದು ಬಹುಮುಖ್ಯವಿದೆ. ಯಾರು ಸಿರಿವಂತರು ಯಾರು ಸಿರಿವಂತರು. 100 ರೂ.ಗೆ ಒಂದು ರೂ. ಕಡಿಮೆ ಇದೆ ಹೆಂಗೆ ಮಾಡೋದು ಅಂದವ ಅಂವ ಬಡವ, ಇನ್ನೊಬ್ಬ ಅರೆ 99 ಅದಾವ್ ಅಲಾ ಮತ್ತಿನೇನ್ ಅನ್ನೋವ ಶ್ರೀಮಂತ.
ತೃಪ್ತಿ ಎಲ್ಲಿಂದಲೋ ಬರುವದಲ್ಲ. ಒಳಗಿಂದಲೇ ಅದು ಬರಬೇಕು. ಪ್ಲಾಸ್ಟಿಕ್ ಹೂವುಗಳು ಸುಂದರವಾಗಿರುತ್ತವೆ. ಆದರೆ ವಾಸನೆ ಬರುವದಿಲ್ಲ. ಮಲ್ಲಿಗೆ ಒಂದಿಷ್ಟು ಹೂವು ಹಾಕು ಅದರ ಮಾಧುರ್ಯ, ಸುವಾಸನೆ ಎಷ್ಟು ಅದ್ಭುತ. ಅದು ಒಳಗಿಂದಲೇ ಬರಬೇಕು.
ಇನ್ನೊಬ್ಬರ ಮನೆಗೆ ಹೋಗಿ ಯಾವುದೋ ಒಂದು ವಸ್ತು ಇಲ್ಲಾಂದ್ರೆ ಬಡವ. ಮನೆ ತುಂಬಾ ಸಾಮಾನು ಇಡುವದಿಲ್ಲ. ಮನೆ ಮನೆ ಖಾಲಿ ಖಾಲಿ ಇರಬೇಕು. ಅಸಮಧಾನ ಇರಬೇಕು. ಭಕ್ತಿ ಇರಬೇಕು. ಅದು ತೃಪ್ತಿ ತುಂಬುವಂತೆ ಮಾಡುತ್ತದೆ. ಒಂದು ಹೂವು ಅದರಲ್ಲಿ ಸ್ವರ್ಗ ಕಾಣುವುದು. ಎಲ್ಲವನ್ನು ಮಾಡುವುದು ಎದೆಯೊಳಗಿರುವ ಭಾವ ಅದು ಪವಿತ್ರವಾಯಿತು ಅದು ಜಗತ್ತನ್ನ ಸ್ವರ್ಗ ಮಾಡ್ತ ನಮ್ಮ ಜೀವನವನ್ನು ಪವಿತ್ರಗೊಳಿಸುತ್ತದೆ. ಇಂತಹ ಸಾಧನವನ್ನು ನಾವು ಪಡೆದರೆ ಅದೇ ಸ್ವರ್ಗ ಸಾರ್ಥಕ.
ಎದೆಯೊಳಗಿರುವ ಪರಮ ತೃಪ್ತಿ ಅದ. ನಮ್ಮ ಎದೆಯೊಳಗೆ ಆ ತೃಪ್ತಿ ಇತ್ತಲ್ಲ. ನಮ್ಮಷ್ಟು ಶ್ರೀಮಂತರಾರು ಇಲ್ಲ. ಅವರಂಗ ಇರಬೇಕು ಇವರಂಗ ಇರಬೇಕು ಅನ್ಕೊಂಡ್ರ ಅದು ಸಾಧ್ಯ ಅದನೇನು. ಒಬ್ಬರ ಅದರ ಜಗತ್ತಿನಲ್ಲಿ ಅವನ ಹತ್ರ ನೂರು ವಾಹನಗಳು ಅದಾವ. ಆದರೆ ಆತ ಸೈಕಲ್ ಮೇಲೆ ತಿಗುತ್ತಾನೆ. ವೈದ್ಯರು ಆತನಿಗೆ ನೀನು ಸೈಕಲ್ ತುಳಿದರೆ ಆರೋಗ್ಯಕರವಾಗಿರ್ತೀರಿ ಎಂದು ಹೇಳಿದ್ದಾರ. ಅದಕ ಆತ ಸೈಕಲ್ ಮೇಲೆ ಇಂದಿಗೂ ಸಂಚಾರ ಮಾಡ್ತಾನ್ ಇಲ್ಲೆ ಮುಂಬಯಿಯೊಳಗ ಅದರ ಅವರು.
ಅವರ ಮನೆಯೊಳಗಿರುವ ಆಳು ಮಗನ ಹತ್ತಿರ ಒಂದು ಸೈಕಲ್ ಅದ ಅಂವ ಅಂತಾನ್ ನಮ್ಮ ಸಾಹುಕಾರ ಹತ್ತಿರವು ಒಂದು ಸೈಕಲ್ ನಿತ್ಯ ತುಳಿತಾರ, ನನ್ನ ಹತ್ತಿರವು ಒಂದು ಸೈಕಲ್ ಅದ. ಅವರ ಹತ್ತಿರ ಎಲ್ಲಾವು ಇದ್ದು ಅವರು ಸೈಕಲ್ ತುಳಿತಿದ್ದಾಎ. ನಾನು ಏನು ಇಲ್ಲ ಬರಿ ಸೈಕಲ್ ಅದ ಆದರ.. ಇಬ್ರು ಸೈಕಲ್ ತುಳಿತೀವಿ ಅನ್ನುತ್ತಾನೆ. ಅಂದ್ರೆ ಇಲ್ಲಿ ತೃಪ್ತಿ ಹೇಗಿದೆ ನೋಡಿ.