ಪ್ರಮುಖ ಸುದ್ದಿ
ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮೃತ ದೇಹಪತ್ತೆ!
ಮಂಗಳೂರು: ನೇತ್ರಾವತಿ ನದಿ ಬಳಿ ನಾಪತ್ತೆಯಾಗಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅಳಿಯ , ಉದ್ಯಮಿ ಸಿದ್ಧಾರ್ಥ ಅವರ ಮೃತದೇಹ ಪತ್ತೆ ಆಗಿದೆ. ಸೋಮವಾರ ಸಂಜೆಯಿಂದ ಸಿದ್ಧಾರ್ಥ ನಾಪತ್ತೆ ಆಗಿದ್ದು ನಿನ್ನೆ ಇಡೀ ದಿನ ಶೋಧ ಕಾರ್ಯ ನಡೆದಿತ್ತು. ಮಳೆ ಕಾರಣ ನಿನ್ನೆ ರಾತ್ರಿ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಬೆಳಗ್ಗೆ ಮತ್ತೆ ಶೋಧ ಕಾರ್ಯ ಆರಂಭಿಸಲಾಗಿತ್ತು. 36 ಗಂಟೆಗಳ ಬಳಿಕ ಸಿದ್ಧಾರ್ಥ ನೇತ್ರಾವತಿ ನದಿ ಹಿನ್ನೀರಿನಲ್ಲಿ ಶವವಾಗಿ ಪತ್ತೆ ಆಗಿದ್ದಾರೆ