ಶಹಾಪುರಃ ಕಾರ್ಮಿಕರಿಗೆ ಆಹಾರ ಸಾಮಾಗ್ರಿ ಕಿಟ್ ವಿತರಣೆ
ಕಾರ್ಮಿಕರಿಗೆ ಕಿಟ್ ವಿತರಿಸಿದ ನಗರಸಭೆ ಸದಸ್ಯ
ಯಾದಗಿರಿಃ ಕೊರಿನಾ ಮಹಾಮಾರಿ ದೇಶದೆಲ್ಲಡೆ ಹರಡುತ್ತಿದ್ದು, ಕೊರೊನಾ ತಡೆಗೆ ನಗರದಲ್ಲಿ ಶ್ರಮಿಸುತ್ತಿರುವ ಕಾರ್ಮಿಕರಿಗೆ, ಅಕ್ಕಿ, ಬೇಳೆ ಇತರೆ ದಿನಸಿ ಸಾಮಾಗ್ರಿಗಳ ಕಿಟ್ ತಯಾರಿಸಿ ಇಲ್ಲಿನ ನಗರಸಭೆ ಸದಸ್ಯ, ವೀರಶೈವ ಸಮಾಜದ ಮುಖಂಡ ಸಿದ್ದು ಆರಬೋಳ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೋವೆಲ್ ಕೋವಿಡ್ -19 ನಡಿ ಹಗಲಿರಳು ಕೆಲಸದಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ನಗರಸಭೆ ಸದಸ್ಯನಾಗಿ ಕೈಲಾದ ಸಹಾಯ ನೀಡಬೇಕೆಂದು ಕಿಟ್ ವಿತರಣೆ ಮಾಡಿರುವೆ.
ಇಂತಹ ಸಂದರ್ಭದಲ್ಲಿ ಶ್ರಮಿಕರಿಗೆ, ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿ, ಪೊಲೀಸರು ಜೀವದ ಹಂಗು ತೊರೆದು ಕರ್ತವ್ಯ ದಲ್ಲಿ ನಿರತರಾಗಿದ್ದಾರೆ. ಕೊರೊನಾ ತಡೆಗೆ ಸರ್ಕಾರ ಸೂಚಿಸಿದ ಎಲ್ಲಾ ನಿಯಮಗಳನ್ನು ಜನರು ಪಾಲಿಸಬೇಕು.
ಸಾಮಾಜಿಕ ಅಂತರ ಬಹುಮುಖ್ಯವಾಗಿದ್ದು ಎಲ್ಲರು ಪಾಲಿಸಬೇಕು. ಅಲ್ಲದೆ ಕಾರ್ಮಿಕರಿಗೆ ಮತ್ತು ಪೊಲೀಸರಿಗೆ ತಾಲೂಕಾಡಳಿತ ಸ್ಯಾನಿಟೈಸರ್ ವಿತರಣೆ ಮಾಡಬೇಕು. ಕಾಲಕಾಲಕ್ಕೆ ಅವರಿಗೂ ಕೈತೊಳೆದುಕೊಳ್ಳಲು ಆಗಲ್ಲ.
ಸ್ಯಾನಿಟೈಸರ್ ಆದರು ಬಳಸುತ್ತಾರೆ, ಅವರಿಗೂ ಕುಟುಂಬ, ಮನೆ ಇದೆ. ಅವರ ಸುರಕ್ಷತೆಗೆ ಗಮನ ಹರಿಸಬೇಕು ಎಂದು ಇದೆ ಸಂದರ್ಭದಲ್ಲಿ ಅವರು ಮನವಿ ಮಾಡಿದರು. ಮುಖಂಡರಾದ ರುದ್ರಪ್ಪ ಚಟ್ರಿಕಿ ಇತರರಿ