ರೈತರಿಗೆ ಸಿಹಿ ಸುದ್ದಿ: ಆಸ್ತಿ, ಬೆಳೆ ಹಾನಿಗೊಳಗಾದವರಿಗೆ 775 ಕೋಟಿ ಬಿಡುಗಡೆ

(COMPENSATION:) ರಾಜ್ಯಾದ್ಯಂತ ಕಳೆದ ಒಂದು ತಿಂಗಳಿನಿಂದ ವಾಡಿಕೆಗಿಂತ ಅಧಿಕ ಮಳೆ ಆಗುತ್ತಿರುವಂತಹ ಕಾರಣದಿಂದಾಗಿ ರಾಜ್ಯದ ಸಾರ್ವಜನಿಕರ ಆಸ್ತಿ ಹಾಗೂ ಬೆಳೆ ನಷ್ಟವಾಗಿದ್ದು, ಇದಕ್ಕೆ ಪರಿಹಾರ ನೀಡಲು ಕರ್ನಾಟಕ ಸರ್ಕಾರವು 775 ಕೋಟಿ ರೂಪಾಯಿ ಹಣ ಅನುದಾನ ಬಿಡುಗಡೆ ಮಾಡಲು ಮುಂದಾಗಿದ್ದು, ಇದರಲ್ಲಿ ಯಾರಿಗೆಲ್ಲಾ ಪರಿಹಾರ ಹಣ ಸಿಗಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ರೈತರ ಬೆಳೆ ಹಾಗೂ ಮನೆ – ಆಸ್ತಿ ನಷ್ಟವಾಗಿರುವುದರಿಂದ ಪರಿಹಾರವನ್ನು ನೀಡುವ ಸಂಬಂಧ ಮೊದಲನೆಯ ಹಂತದಲ್ಲಿ NDRF ಮಾರ್ಗಸೂಚಿ ಅನ್ವಯ 775 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ. ಅದೇ ರೀತಿ ಇನ್ನೂ ಹೆಚ್ಚುವರಿಯಾಗಿ ಬೇಕಾದರೆ ಸರ್ಕಾರವು ಹೆಚ್ಚುವರಿಯಾಗಿ 200 ಕೋಟಿ ರೂಪಾಯಿ ಹಣವನ್ನು NDRF ಮಾರ್ಗಸೂಚಿ ಅನ್ವಯ ಅಡಿಯಲ್ಲಿ ಬಿಡುಗಡೆ ಮಾಡಲು ನಾವು ಸಿದ್ಧರಿದ್ದೇವೆ ಎಂದು ಸಚಿವರು ಹೇಳಿದ್ದಾರೆ.
ಹಾಗಾದರೆ ಪರಿಹಾರ ಪಡೆಯುವುದು ಹೇಗೆ?
ಕರ್ನಾಟಕ ರಾಜ್ಯಾದ್ಯಂತ ಅತಿಯಾದ ಮಳೆಯಿಂದಾಗಿ ಹಾನಿ-ಗೀಡಾಗಿರುವ ಜಿಲ್ಲೆಗಳ ಸಾರ್ವಜನಿಕರು ಆರ್ಥಿಕ ಪರಿಹಾರವನ್ನು ಪಡೆಯಲು ನಿಮ್ಮ ಗ್ರಾಮಕ್ಕೆ ಸಂಬಂಧಿಸಿದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ನೀವು ಪರಿಹಾರ ಪಡೆದುಕೊಳ್ಳಲು ಅವಕಾಶವಿರುತ್ತದೆ.
ಒಂದು ವೇಳೆ ನಿಮ್ಮ ಕೃಷಿ ಬೆಳೆಗಳಾದ ಭತ್ತ, ಮೆಕ್ಕೆಜೋಳ, ರಾಗಿ ಬೆಳೆಗಳು ಹಾಳಾಗಿದ್ದಲ್ಲಿ ನೀವು ಸಂಬಂಧಪಟ್ಟ ದಾಖಲಾತಿಗಳೊಂದಿಗೆ ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನೀವು ಸೂಕ್ತ ಪರಿಹಾರ ಪಡೆದುಕೊಳ್ಳಲು ಅವಕಾಶವಿರುತ್ತದೆ.