ಭಾವನಾತ್ಮಕ ವಿಷಯಗಳಿಗೆ ಜನ ಮಣೆ ಹಾಕಲಿಲ್ಲ-ಸಿದ್ರಾಮಯ್ಯ
ವಿವಿ ಡೆಸ್ಕ್ಃ ಈ ಹಿಂದಿನ ಚುನಾವಣಾ ಫಲಿತಾಂಶಗಳಿಗೆ ಹೋಲಿಸಿದರೆ, ಬಿಜೆಪಿ ಎರಡೂ ರಾಜ್ಯಗಳಲ್ಲಿ ಹಿನ್ನಡೆ ಎದುರಿಸಿದೆ. ಮಹಾರಾಷ್ಟ್ರದಲ್ಲಿ ಈ ಹಿಂದೆ ಗೆದ್ದ ಸ್ಥಾನಗಳು 122 ರಿಂದ 100 ಕ್ಕೆ ಇಳಿದಿವೆ. ಹರಿಯಾಣದಲ್ಲಿ ಅದು 47 ರಿಂದ 41 ಕ್ಕೆ ಇಳಿದಿದೆ. ಬಿಜೆಪಿಗೆ ಭಾರಿ ಗೆಲುವು ಮುನ್ಸೂಚನೆ ನೀಡಿದ್ದ ಎಲ್ಲಾ ಸಮೀಕ್ಷೆಗಳು ವಿಫಲವಾಗಿವೆ ಎಂದು ವಿಪಕ್ಷ ನಾಯಕ ಸಿದ್ರಾಮಯ್ಯ ಸರಣಿ ಟ್ವಿಟ್ ಮಾಡಿದ್ದಾರೆ.
ಹರಿಯಾಣದಲ್ಲಿ ಪ್ರಧಾನಿ ಮೋದಿ ಸಾಕಷ್ಟು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ನಂತರ ಅಲ್ಲಿ ಬಿಜೆಪಿ ಸಾಕಷ್ಟು ಸ್ಥಾನಗಳನ್ನು ಪಡೆಯಲು ವಿಫಲವಾಗಿದೆ ಎಂದು ಟ್ವಿಟ್ ನಲ್ಲಿ ಬರೆದ ಅವರು, ಮೋದಿಯವರನ್ನು ಜನ ಮರೆಯುತ್ತಿದ್ದಾರೆ ಎಂಬುದಕ್ಕೆ ಮುನ್ಸೂಚನೆಯಾಗಿದೆ ಎಂದು ಟ್ವಿಟಿಸಿದ್ದಾರೆ.
ಕೆಲವು ನಾಯಕರು ಪಕ್ಷವನ್ನು ತೊರೆದಿದ್ದರಿಂದ ನಮಗೆ ಹರಿಯಾಣದಲ್ಲಿ ಸ್ವಲ್ಪ ಹಿನ್ನಡೆ ಉಂಟಾಯಿತು. ಪಕ್ಷ ಮತ್ತು ಸಂಪನ್ಮೂಲಗಳನ್ನು ಸಂಘಟಿಸಲು ಸ್ವಲ್ಪ ಹೆಚ್ಚು ಪ್ರಯತ್ನ ಮಾಡಿದರೆ, ಸುಲಭವಾಗಿ ಅರ್ಧದಷ್ಟು ದಾಟಬಹುದಿತ್ತು.
ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಮೋದಿ ಸೇರಿದಂತೆ ಬಿಜೆಪಿ ಪಕ್ಷದ ಯಾರೊಬ್ಬರು ತಮ್ಮ ಸರ್ಕಾರದ ಸಾಧನೆಗಳ ಕುರಿತು ಮಾತನಾಡಲಿಲ್ಲ.
ಅವರು ಕಾಶ್ಮೀರ ಮತ್ತು ಪಾಕಿಸ್ತಾನದಂತಹ ಭಾವನಾತ್ಮಕ ವಿಷಯಗಳ ಬಗ್ಗೆ ಮಾತನಾಡುವ ಮೂಲಕ ಮಾತ್ರ ಚುನಾವಣೆಯಲ್ಲಿ ಹೋರಾಡಿದರು. ಹೀಗಾಗಿ ಜನರು ಅವರನ್ನು ತಿರಸ್ಕರಿಸಿದ್ದಾರೆ ಎಂದು ಸರಣಿ ಟ್ವಿಟ್ ಮಾಡಿದ್ದಾರೆ.