ಪ್ರಮುಖ ಸುದ್ದಿ
ಟ್ವಿಟ್ ಮೂಲಕ ಸಿದ್ದುಗೆ ತಿರುಗೇಟು ನೀಡಿದ ಶ್ರೀರಾಮುಲು
ಬೆಂಗಳೂರಃ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರ ಕೆರೂರು ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಇದೆ ಎಂಬ ಕಾರಣಕ್ಕೆ, ಜನರ ಮುಂದೆ ನನ್ನೆದುರು ಸೋತವನೇ ಆರೋಗ್ಯ ಸಚಿವನಾಗಿದ್ದಾನೆ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ.
ಈ ಮಾತಿಗೆ ಟ್ವಿಟ್ ಮೂಲಕ ತಿರುಗೇಟು ನೀಡಿದ ಆರೋಗ್ಯ ಸಚಿವ ಶ್ರೀರಾಮುಲು, ನನ್ನ ವಿರುದ್ಧು ಸೋತವನೇ ಹೆಲ್ತ್ ಮಿನಿಸ್ಟರ್ ಎಂದು ಹೇಳುವ ನಿಮಗೆ ತಿಳಿದಿರಲು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀವು ಸೋತಷ್ಟು ಹೀನಾಯವಾಗಿ ನಾನು ಬಾದಾಮಿಯಲ್ಲಿ ಸೋತಿರುವದಿಲ್ಲ. ಚಾಮುಂಡಿ ಕ್ಷೇತ್ರದ ಜನರನ್ನು ನೀವು ಮರೆತಂತೆ ನಾನು ಬಾದಾಮಿಯ ಜನರನ್ನು ಮರೆತಿಲ್ಲ. ನಿಮಗಿಂತ ಮೊದಲು ನೆರೆ ಹಾನಿ ಬಂದಾಗ ನಾನು ಜನರನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದೆ, ನಿಮಗೆ ತಿಳಿದಿರಲಿ ಎಂದು ಟ್ವಿಟ್ ಮೂಲಕ ಎದುರೇಟು ನೀಡಿದ್ದಾರೆ.