ಪ್ರಮುಖ ಸುದ್ದಿ
ಸಿದ್ದು ಕ್ಷಮೆಯಾಚಿಸದಿದ್ದರೆ ಹಕ್ಕು ಚ್ಯುತಿ ಮಂಡನೆ-ಸಿಎಂ BSY
ಸ್ಪೀಕರ ಬಗ್ಗೆ ಅಸಡ್ಡೆ, ಅಗೌರವ ತೋರಿ ಮಾತನಾಡಿದ ಆರೋಪ
ಬೆಂಗಳೂರಃ ಸ್ಪೀಕರ್ ವಿಧಾನ ಸಭಾ ಅಧ್ಯಕ್ಷರು, ಅದು ಸಂವಿಧಾನ ಪೀಠ ಅದರ ಅಧ್ಯಕ್ಷ ಕಾಗೇರಿ ಕುರಿತು ಲಘುವಾಗಿ ಮಾತನಾಡುವದು ಸರಿಯಲ್ಲ. ವಿಪಕ್ಷ ನಾಯಕರಾಗಿ ಈ ರೀತಿ ಏಕವಚನದಲ್ಲಿ ಸಭಾ ಅಧ್ಯಕ್ಷರ ವಿರುದ್ಧ ಮಾತನಾಡಬಾರದು, ಕೂಡಲೇ ವಿಪಕ್ಷ ನಾಯಕ ಸಿದ್ರಾಮಯ್ಯ ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಹಕ್ಕು ಚ್ಯುತಿ ಮಂಡಿಸಲಾಗುವದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದ್ದಾರೆ.
ಡಾಲರ್ಸ್ ಕಾಲೊನಿಯ ಸ್ವಂತ ಮನೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಆಗಿ ಕೆಲಸ ಮಾಡಿದ ಅವರು, ಸ್ಪೀಕರ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿ ಅವಮಾನ ಮಾಡುವದು ಸರಿಯಲ್ಲ.
ಒಂದು ಪಕ್ಷದ ವಿರೋಧ ಪಕ್ಷದ ನಾಯಕನಾಗಲಿ ಅಥವಾ ಶಾಸಕರಾಗಲಿ ಸ್ಪೀಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಉದಾಹರಣೆಗಳಿಲ್ಲ. ಅಧಿಕಾರದ ಮದದಿಂದ ಸಿದ್ಧರಾಮಯ್ಯ ಹುಚ್ಚುಹುಚ್ಚು ಆಗಿ ಮಾತನಾಡುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ನೆಲಸಮ ಆಗುತ್ತಿದೆ.