ಪ್ರಮುಖ ಸುದ್ದಿ
ಅಮೀತ್ ಶಾರನ್ನು ಸಿದ್ರಾಮಯ್ಯ ದಡ್ಡ ಎಂದಿದ್ದೇಕೆ ಗೊತ್ತೆ.?
ಅಮಿತ್ ಶಾ ದಡ್ಡ – ಸಿದ್ರಾಮಯ್ಯ ಹೇಳಿಕೆ
ಬೆಂಗಳೂರಃ ಹಿಂದಿ ಭಾಷೆಯನ್ನು ಒತ್ತಾಯ ಪೂರ್ವಕ ಜನರ ಮೇಲೆ ಹೇರುವದು ಸರಿಯಲ್ಲ. ಅಮೀತ್ ಶಾ ಓರ್ವ ದಡ್ಡ ಎಂದು ಮಾಜಿ ಸಿಎಂ ಸಿದ್ರಾಮಯ್ಯ ಕುಟಕುಕಿದರು.
ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಹಿಂದಿ ಭಾಷೆಗೆ ಯಾವುದೇ ಮಾನ್ಯತೆ ಇಲ್ಲ. ಅಂತಹ ಭಾಷೆಯನ್ನು ಜನರ ಮೇಲೆ ಒತ್ತಾಯ ಪೂರ್ವಕ ಹೇರುವದು ಎಷ್ಟರಮಟ್ಟಿಗೆ ಒಳಿತು ಎಂದ ಅವರು, ಹಿಂದಿ ಕಲಿಯಲೇನು ಅಭ್ಯಂತರವಿಲ್ಲ.
ಆದರೆ ಹಿಂದಿಯನ್ನು ಒತ್ತಾಯವಾಗಿ ಕಲಿಲೇಬೇಕು. ಅದುವೆ ಆಡಳಿತ ಭಾಷೆಯನ್ನಾಗಿ ಮಾಡ ಹೊರಟಿರುವದು ತಪ್ಪಲ್ಲವೇ? ಎಂದು ಪ್ರಶ್ನಿಸಿದ್ದಾರೆ.