ಪ್ರಮುಖ ಸುದ್ದಿ
ಯಾದಗಿರಿ : ಅಜ್ಜ – ಮೊಮ್ಮಗ ಸಿಡಿಲಿಗೆ ಬಲಿ!
ಯಾದಗಿರಿ : ಕುರಿ ಮೇಯಿಸಲು ಜಮೀನುಗಳತ್ತ ತೆರಳಿದ್ದ ಅಜ್ಜ ಮತ್ತು ಮೊಮ್ಮಗ ಸಿಡಿಲಿಗೆ ಬಲಿಯಾದ ಘಟನೆ ಸುರಪುರ ತಾಲೂಕಿನ ನಗನೂರು ಗ್ರಾಮದ ಸಮೀಪ ನಡೆದಿದೆ. ಮಲ್ಲಪ್ಪ(50), ಮೊಮ್ಮಗ ದೇವರಾಜ್ (15) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಕೆಂಭಾವಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಂದು ಸಂಜೆಯಿಂದ ಜಿಲ್ಲೆಯ ವಿವಿದೆಡೆ ಮಳೆ ಸುರಿದಿದೆ. ಈ ಸಂದರ್ಭದಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ಬಂಡೆಗಲ್ಲುಗಳತ್ತ ತೆರಳಿದ್ದಾಗಲೇ ಅಜ್ಜ – ಮೊಮ್ಮಗನಿಗೆ ಸಾವಿನ ಸಿಡಿಲು ಬೆನ್ನಟ್ಟಿ ಬಂದಿದೆ. ಪ್ರೀತಿಯ ಮೊಮ್ಮಗನೊಂದಿಗೆ ಅಜ್ಜ ಕೊನೆಯುಸಿರೆಳೆದ ಘಟನೆ ಜನರ ಹೃದಯ ಕಲಕಿದೆ. ಮೃತರ ಸಂಬಂಧಿಕರು ಹಾಗೂ ಗ್ರಾಮದ ಜನರ ಆಕ್ರಂದ ಮುಗಿಲು ಮುಟ್ಟಿದೆ.