Homeಅಂಕಣಜನಮನಪ್ರಮುಖ ಸುದ್ದಿಮಹಿಳಾ ವಾಣಿ
ಗರಿ ಗರಿಯಾದ ಕಾರ್ನ್ ಕಬಾಬ್ ಮಾಡುವ ವಿಧಾನ…

ಬೇಕಾಗುವ ಪದಾರ್ಥಗಳು…
- ಸ್ವೀಟ್ ಕಾರ್ನ್ – 1 ಬಟ್ಟಲು
- ಆಲೂಗಡ್ಡೆ – 1
- ಈರುಳ್ಳಿ – 1
- ಕ್ಯಾಪ್ಸಿಕಂ – 1/4 ಬಟ್ಟಲು
- ಹಸಿಮೆಣಸಿಕಾಯಿ– 5
- ನಿಂಬೆ ಹಣ್ಣು – ಸಣ್ಣದು
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಪುದೀನಾ -ಸ್ವಲ್ಪ
- ಶುಂಠಿ – ಸ್ವಲ್ಪ
- ಗರಂ ಮಸಾಲ – 1/2 ಚಮಚ
- ಅಕ್ಕಿ ಹಿಟ್ಟು – 1 ಚಮಚ
- ಕಡಲೆ ಹಿಟ್ಟು – 1 ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಬ್ರೆಡ್ – 2 ಸ್ಲೈಸ್
- ಎಣ್ಣೆ – ಕರಿಯಲು
ಮಾಡುವ ವಿಧಾನ…
- ಮೊದಲಿಗೆ ಸ್ವೀಟ್ ಕಾರ್ನ್ ಅನ್ನು ನೀರಿನಲ್ಲಿ ಬೇಯಿಸಿ. ಬಳಿಕ ನೀರು ಸೋಸಿ ಮಿಕ್ಸರ್ ಜಾರ್ ಗೆ ಜೋಳದ ಕಾಳುಗಳನ್ನು ಹಾಕಿ ಒಂದು ಸುತ್ತು ಗ್ರೈಂಡ್ ಮಾಡಿ. ತರಿತರಿಯಾಗಿ ರುಬ್ಬಿದ ಸ್ವೀಟ್ ಕಾರ್ನ್ ಅನ್ನು ಒಂದು ಮಿಕ್ಸಿಂಗ್ ಬೌಲ್ ಗೆ ಹಾಕಿ.
- ಬೇಯಿಸಿ ತುರಿದ ಆಲೂಗಡ್ಡೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ಶುಂಠಿ, ಹಸಿಮೆಣಸಿನ ಕಾಯಿ, ಕೊತ್ತಂಬರಿ, ಪುದೀನಾ ಹಾಕಿ ಕಲಸಿ.
- ನಂತರ ಅದಕ್ಕೆ ಗರಂ ಮಸಾಲ ಜೊತೆಗೆ ನೀರಿನಲ್ಲಿ ಅದ್ದಿ ಹಿಂಡಿದ ಬ್ರೆಡ್ ಅನ್ನು ಪುಡಿ ಮಾಡಿ ಹಾಕಿ. ಇದಕ್ಕೆ 1 ಚಮಚ ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ.
- ಬಳಿಕ ಬೇಯಿಸಿದ ಸ್ವೀಟ್ ಕಾರ್ನ್ ಮತ್ತು ನಿಂಬೆ ಹಣ್ಣಿನ ರಸವನ್ನೂ ಸೇರಿಸಿ. ಎಲ್ಲವೂ ಸರಿಯಾಗಿ ಮಿಶ್ರಣ ಆಗುವಂತೆ ಕೈಯಲ್ಲಿ ಕಲಸಿಡಿ. ಎರಡೂ ಅಂಗೈಗೆ ಎಣ್ಣೆ ಸವರಿಕೊಂಡು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ, ಕಾದ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿರಿ. ಇದೀಗ ರುಚಿಕರವಾದ ಕಾರ್ನ್ ಕಬಾಬ್ ಸವಿಯಲು ಸಿದ್ಧ.