ಗೌಡರ ಮನೆಯೊಳಗೆ ಟಗರು ಆಟ ಶುರು.!
ಗೌಡರ ಮನೆಯಲ್ಲಿ ಟಗರು ಆಟ ಶುರು
ಮೈಸೂರುಃ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಂಬಂಧಿಕ ಪ್ರೋ.ರಂಗಪ್ಪ ನವರ ಮನೆಯಲ್ಲಿ ಮಾಜಿ ಸಿಎಂ ಸಿದ್ರಾಮಯ್ಯ ನವರಿಗೆ ಆತಿಥ್ಯ ದೊರೆತಿರುವುದು ತೀವ್ರ ಚರ್ಚೆಗೆಕಾರಣವಾಗಿದೆ ಎನ್ನಲಾಗಿದೆ.
ಪ್ರೋ.ರಂಗಪ್ಪ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜ ನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.
ಸೋತ ನಂತರ ಎಚ್ಡಿಡಿ ಸಂಬಂಧಿಕರಾರು ಭೇಟಿಯಾಗಿ ಮಾತನಾಡಲಿಲ್ಲ. ಅಲ್ಲದೆ ಸರಣಿ ಸಭೆ, ಸಮಾರಂಭಗಳಿಗೆ ರಂಗಪ್ಪನವರನ್ನು ಜೆಡಿಎಸ್ ಆಹ್ವಾನ ನೀಡಲಿಲ್ಲ ಎನ್ನಲಾಗಿದೆ.
ಹೀಗಾಗಿ ಸಂಬಂಧಿಕರ ಮೇಲೆ ಮುನಿಸಿಕೊಂಡಿದ್ದ ಪ್ರೊ.ರಂಗಪ್ಪ ಸಹಜವಾಗಿಯೇ ಜೆಡಿಎಸ್ ಸಭೆ ಸಮಾರಂಗಳಿಂದ ದೂರ ಉಳಿದಿದ್ದು, ಈಗ ಯಾವುದೇ ಪಕ್ಷದ ನಾಯಕರು ನನ್ನನ್ನು ಸಂಪರ್ಕಿಸಿ ಜವಬ್ದಾರಿ ನೀಡಿದ್ದಲ್ಲಿ ನಾನು ಕಾರ್ಯ ನಿರ್ವಹಿಸುವೆ ಎಂಬ ಮಾತನ್ನು ಪ್ರೊ.ರಂಗಪ್ಪನವರು ಆಡುತ್ತಿದ್ದಾರೆ.
ಹೀಗಾಗಿ ಟಗರು ಇದೇ ಅವಕಾಶ ಕಾಯ್ತಾ ಇದ್ದದ್ದು, ತಾನಾಗಿಯೇ ಸದಾವಕಾಶ ದೊರೆತಿದ್ದು, ಇದನ್ನೆ ಚನ್ನಾಗಿ ಬಳಸಿಕೊಳ್ಳಬೇಕೆಂಬ ತಂತ್ರಗಾರಿಕೆ ರೂಪಿಸಿದ ಸಿದ್ರಾಮಯ್ಯ ರಂಗಪ್ಪನವರನ್ನು ಅವರ ಮನೆಗೆ ತೆರಳಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ಸಿದ್ರಾಮಯ್ಯ ಗೌಡರ ಸಂಬಂಧಿಕರ ಮನೆಯೊಳಗೆ ಹೆಜ್ಜೆ ಇಟ್ಟಿದ್ದು, ಮುಂದಿನ ಬೈ ಎಲೆಕ್ಷನ್ ಗೆ ತನ್ನದೆ ಆಟ ಶುರು ಮಾಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.