ಪ್ರಮುಖ ಸುದ್ದಿ
ವಿಪಕ್ಷ ಸ್ಥಾನ ಹುದ್ದೆಗೆ ಸಿದ್ದು ಲಾಯಕ್ ಇಲ್ಲ – ಈಶ್ವರಪ್ಪ ಕಿಡಿ
ಅಥಣಿಃ ಸಿದ್ರಾಮಯ್ಯ ವಿಪಕ್ಷ ಸ್ಥಾನದಲ್ಲಿ ಕೂಡಲು ಲಾಯಕ್ ಇಲ್ಲ. ಸಿದ್ರಾಮಯ್ಯ ಸುಳ್ಳುಗಾರ. ಸಿದ್ರಾಮಯ್ಯ ಆಗಲ್ಲ ಅಂದ್ರೆ ಆಗುತ್ತೆ ಆಗುತ್ತೇ ಅಂದ್ರೆ ಆಗಲ್ಲ. ನಿಮ್ಮಪ್ಪನಾಣೆಗೂ ಸಿಎಂ ಆಗಲ್ಲ ಎಂದು ಹಿಂದಿನ ಚುನಾವಣೆಯಲ್ಲಿ ಸಿದ್ರಾಮಯ್ಯ ಕುಮಾರಸ್ವಾಮಿ ವಿರುದ್ಧ ಡೈಲಾಗ್ ಹೊಡೆದದ್ದೆ ಹೊಡೆದದ್ದು, ಬೆಳಗಾಗುವದರಲ್ಲಿಯೇ ಅದೇ ಸಿದ್ರಾಮಯ್ಯ ಕುಮಾರಸ್ವಾಮಿ ಕಾಲು ಹಿಡಿದು ಅವರನ್ನೆ ಸಿಎಂ ಮಾಡಲು ಕೈಜೋಡಿಸಿರುವದು ಜನರ ಮರೆತಿಲ್ಲ ಎಂದು ಸಚಿವ ಈಶ್ವರಪ್ಪ ಹರಿಹಾಯ್ದರು.
ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕೈಗೊಂಡ ಪ್ರಚಾರಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಡಿಯೂರಪ್ಪ ಸಿಎಂ ಆಗಲ್ಲ ಅಂದಿದ್ದರು ಈಗ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಸಿದ್ರಾಮಯ್ಯ ಹೇಳುವದೆಲ್ಲ ಸುಳ್ಳು ಎಂದ ಅವರು, ಸಿದ್ರಾಮಯ್ಯನವರ ಮೇಲೆ ಮಾತಿನ ಪ್ರಹಾರ ಮುಂದುವರೆಸಿದ್ದಾರೆ.