ಸಿದ್ರಾಮಯ್ಯರಿಂದ ದೇಶಭಕ್ತಿ ಪಾಠ ನಾವು ಕಲಿಬೇಕಿಲ್ಲ-ಶೋಭಾ
ವಿವಿ ಡೆಸ್ಕ್ಃ ಟಿಪ್ಪುವಿನ ಕೇವಲ ಒಂದು ಭಾಗ ಮಾತ್ರ ನೋಡುವದಲ್ಲ ಸಿದ್ರಾಮಯ್ಯನವರೇ ಇತಿಹಾಸವನ್ನು ಪೂರ್ಣ ಓದಿ, ಕೇವಲ ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ಒಂದೇ ಕಾರಣ ಹೇಳಬೇಡಿ. ಅದನ್ನು ಹೊರತು ಪಡಿಸಿ ಟಿಪ್ಪು ಏನು ಮಾಡಿದ್ದಾನೆ ಎಂಬುದನ್ನು ಮಂಗಳೂರ, ಕೊಡಗು, ಚಿತ್ರದುರ್ಗ ಭಾಗದ ಜನರ ಬಾಯಿಂದ ಕೇಳಿ. ಆ ಭಾಗದಲ್ಲಿ ಟಿಪ್ಪುವಿನ ಅಕ್ರಮ, ಮತಾಂಧಕ್ಕೆ ತುತ್ತಾದ ನೂರಾರು ಕುಟುಂಬಗಳ ರೋಧನೆ ಕೇಳಿ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿಪಕ್ಷ ನಾಯಕರ ವಿರುದ್ಧ ಹರಿಹಾಯ್ದರು.
ಟಿಪ್ಪುವಿನ ಅಕ್ರಮ, ಮತಾಂತರ, ಸಮಾಜಕ್ಕೆ ಮಾಡಿದ ಅನ್ಯಾಯ ಕುರಿತು ನಿಮಗೆ ಗೊತ್ತಿಲ್ಲದಿದ್ದರೇ ಇತಿಹಾಸ ಪೂರ್ಣವಾಗಿ ಓದಿ ತಿಳಿದುಕೊಳ್ಳಿ. ಅದು ಬಿಟ್ಟು ಕೇವಲ ರಾಜಕೀಯವಾಗಿ ವಿರೋಧ ಪಡಿಸಬೇಕೆಂಬ ಮನೋಭಾವನೆಯಿಂದ ವಿರುದ್ಧ ಹೇಳಿಕೆ ನೀಡಬೇಡಿ. ಸತ್ಯವನ್ನು ಮರೆಮಾಚಬೇಡಿ. ಪಠ್ಯದಲ್ಲಿ ಟಿಪ್ಪು ಕುರಿತು ಇರುವ ವಿಷಯವನ್ನು ತೆಗೆದು ಹಾಕುವದಕ್ಕಿಂತ ಮೊದಲು ಅವರ ಕುರಿತು ಪೂರ್ಣ ಇತಿಹಾಸ ಅವರ ಅಕ್ರಮ, ಅನ್ಯಾಯ, ಮತಾಂಧತೆ ಮತ್ತು ಆತನ ಘೋರ ಕೃತ್ಯಗಳ ಕುರಿತು ಜನರಿಗೆ ತಿಳಿಸೋಣ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.