ಪ್ರಮುಖ ಸುದ್ದಿ

ಸಿದ್ರಾಮಯ್ಯನವರಿಗೂ ಕೊರೊನಾ ಪಾಸಿಟಿವ್.! ಮಾಜಿ, ಹಾಲಿ ಸಿಎಂಗಳಿಗೆ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸಿದ್ರಾಮಯ್ಯನವರಿಗೂ ಕೊರೊನಾ ಪಾಸಿಟಿವ್.! ಮಾಜಿ, ಹಾಲಿ ಸಿಎಂಗಳಿಗೆ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ

ಬೆಂಗಳೂರಃ ಮಾಜಿ ಸಿಎಂ, ವಿಪಕ್ಷ ನಾಯಕ‌ ಸಿದ್ರಾಮಯ್ಯನವರಿಗೆ ನಿನ್ನೆ ರಾತ್ರಿ ತೀವ್ರ ಜ್ವರದಿಂದ ಬಳಲುತ್ತಿರುವದರಿಂದ ರಾತ್ರಿಯೇ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊರೊನಾ ಟೆಸ್ಟ್ ಮಾಡಲಾಗಿ ಸಿದ್ರಾಮಯ್ಯನವರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.
ಸಿದ್ರಾಮಯ್ಯನವರಿಗೆ ಕೊರೊನಾ ಪಾಸಿಟಿವ್ ಬಂದಿರುವ ಕುರಿತು ಅವರ ಮಗ ಡಾ.ಯತೀಂದ್ರ ಟ್ವಿಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಸಿದ್ರಾಮಯ್ಯನವರ ಆರೋಗ್ಯ ಸದ್ಯ‌ ಸ್ಥಿರವಾಗಿದೆ ಎನ್ನಲಾಗಿದೆ.

ಮೊನ್ನೆ ಸಿಎಂ ಯಡಿಯೂರಪ್ಪನವರು ಕೊರೊನಾ ದೃಢವಾದ ಹಿನ್ನೆಲೆ ಮಣಿಪಾಲ್ ಆಸ್ಪತ್ರೆಯ 11 ನೇ ಮಹಡಿಯ ಕೊಠಡಿವೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಮಾಜಿ ಸಿಎಂ‌ ಸಿದ್ರಾಮಯ್ಯನವರಿಗೂ ಇದೇ ಮಹಡಿಯ ಕೊಠಡಿವೊಂದರಲ್ಲಿ ಪ್ರೋಟೊಕಾಲ್ ಪ್ರಕಾರ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಣಿಪಾಲ ವೈದ್ಯರು ತಿಳಿಸಿದ್ದಾರೆ.

ತಂದೆಯವರ ಸಂಪರ್ಕದಲ್ಲಿರುವವರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಡಾ.ಯತೀಂದ್ರ ಅವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button