ಪ್ರಮುಖ ಸುದ್ದಿ
ಜಾತಿ ಲೆಕ್ಕಾಚಾರ ಹಾಕುವವರು ಜಾತ್ಯತೀತರು ಅಲ್ವೇ.? – ಕುಮಾರಸ್ವಾಮಿ
ವಿವಿ ಡೆಸ್ಕ್ಃ ಮಾಜಿ ಸಿಎಂ ಸಿದ್ರಾಮಯ್ಯನವರು ಆಪ್ತರ ಜೊತೆ ಮಾತುಕತೆ ವೇಳೆ, ಜಾತಿ ಲೆಕ್ಕಚಾರ ಕುರಿತು ಚರ್ಚೆ ನಡೆಸಿರುವ ವಿಡಿಯೋ ವೈರಲ್ಲ ಆಗಿದೆ. ಈ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಜಾತ್ಯಾತೀತರೆಂದು ಜಾತಿ ಬಗ್ಗೆ ಮಾತನಾಡುತ್ತಾರೆ ಇವರೋ ಕೋಮುವಾದಿಗಳಲ್ಲವಂತೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿಪಕ್ಷ ನಾಯಕ ಸಿದ್ರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪರಸ್ಪರ ವಾದ ವಾಗ್ವಾದ ನಡೆಸಿದ, ಸಿದ್ದು-ಕುಮಾರಸ್ವಾಮಿ, ಇಂದು ಟ್ವಿಟ್ ಮೂಲಕ ಸಿದ್ರಾಮಯ್ಯನವರು ವೈರಲ್ ವಿಡಿಯೋ ಕುರಿತು ನೀಡಿದ ಸಮಜಾಯಿಷಿ ಕುರಿತು ಕುಮಾರಸ್ವಾಮಿ ಟೀಕಿಸಿದ್ದಾರೆ. ಕಾವೇರಿ ನಿವಾಸದಲ್ಲಿ ಕುಳಿತು ವಿಪಕ್ಷ ನಾಯಕನಾಗಿ ಆಪ್ತರೊಂದಿಗೆ ಜಾತಿ ಲೆಕ್ಕಚಾರ ಮಾತುಕತೆ ನಡೆಸಿದ್ದು, ಅದೊಂದುಖಾಸಗಿ ಮ್ಯಾಟರ್ ಅಂತ ಹೇಳೋದು ಎಷ್ಟರಮಟ್ಟಿಗೆ ಸರಿ. ಜನ ಹುಷಾರ್ ಇದ್ದಾರೆ. ಎಲ್ಲವೂ ಅರ್ಥವಾಗುತ್ತದೆ ಎಂದು ಮಾಧ್ಯಮಕ್ಕೆ ಉತ್ತರಿಸಿದರು.