ಪ್ರಮುಖ ಸುದ್ದಿ
ಗಾಂಧೀಜಿಯೂ ಹಿಂದೂ ನಾನು ಹಿಂದೂ- ಸಿದ್ರಾಮಯ್ಯ
ಸಾರ್ವಕರ್ ಅವರಿಗೆ ಭಾರತ ರತ್ನ ನೀಡುವ ವಿಚಾರ
ವಿವಿ ಡೆಸ್ಕ್ಃ ಸಾವರ್ಕರ್ ಹಿಂದೂ ಮಹಾಸಭಾದಲ್ಲಿದ್ದರು ಎಂಬ ಕಾರಣಕ್ಕಾಗಿಯೇ ಬಿಜೆಪಿಯವರು ಅವರಿಗೆ ಭಾರತ ರತ್ನ ಕೊಡುತ್ತಿದ್ದಾರೆ. ಗಾಂಧಿ ಹತ್ಯೆ ಆರೋಪಿಗೆ ಭಾರತ ರತ್ನ ಬೇಡ ಅಂತ ಹೇಳಿದ್ದೇನೆ. ಹಿಂದೂಗಳಿಗೆ ಕೊಡಬೇಡಿ ಎಂದು ಹೇಳಿಲ್ಲ ಎಂದು ಮಾಜಿ ಸಿಎಂ ಸಿದ್ರಾಮಯ್ಯ ಟ್ವಿಟ್ ನಲ್ಲಿ ಸ್ಪಷ್ಟನೆ ನೀಡಿದ್ದು ಅಲ್ಲದೆ,
ಗಾಂಧೀಜಿ ಕೂಡಾ ಹಿಂದೂ, ನಾನು ಕೂಡು ಹಿಂದೂ ಎಂದು ಬರೆದುಕೊಂಡಿದ್ದಾರೆ. ಸಾವರ್ಕರ್ ಓರ್ವ ದೇಶ ಭಕ್ತ ಇಂತಹ ಮಹಾನ್ ವ್ಯಕ್ತಿಯ ಕುರಿತು ಮನಬಂದಂತೆ ಹೇಳಿಕೆ ನೀಡುತ್ತಿರುವದು ವಿಷಾಧನೀಯ. ಇದು ರಾಜಕೀಯ ವಿಷಯವಾಗಿಸಿಕೊಂಡಿದ್ದು, ವಿಷಾಧನೀಯ. ಜನರೇ ಈ ಕುರಿತು ಉತ್ತರಿಸಬೇಕಿದೆ ಎಂದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.