ರಾಜ್ಯದ ಬಿಜೆಪಿ ಸರ್ಕಾರ ಸತ್ತೋಗಿದೆ-ಸಿದ್ರಾಮಯ್ಯ ವಾಗ್ದಾಳಿ
ಬೆಳಗಾವಿಃ ರಾಜ್ಯದ ಸರ್ಕಾರ ಸತ್ತೋಗಿದೆ. ಕಳೆದ ಮೂರು ತಿಂಗಳಾದರೂ ಸಂತ್ರಸ್ಥರಿಗೆ ಪರಿಹಾರ ಒದಗಿಸುವಲ್ಲಿ ಕ್ರಮ ತೆಗೆದುಕೊಳ್ಳುತ್ತಿಲ್ಲ. ಯಾವ ಕ್ಷೇತ್ರಕ್ಕೂ ಪರಿಹಾರ ತಲುಪಲಿಲ್ಲ. ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಬಂದ ಮೇಲಾದರೂ ಇಲ್ಲಿನ ಸರ್ಕಾರ ತಿಳಿದುಕೊಳ್ಳಬೇಕಿತ್ತು ಎಂದು ವಿಪಕ್ಷ ನಾಯಕ ಸಿದ್ರಾಮಯ್ಯ ಬಿಜೆಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಸಂತ್ರಸ್ಥರಿಗೆ ಸಮರ್ಪಕ ಪರಿಹಾರ ನೀಡದೆ, ಸುಮ್ಮನೆ ಬರಿಗೈಯಲ್ಲಿ ಓಡಾಡುತ್ತಿದ್ದಾರೆ. ಅಲ್ಲದೆ ಸಚಿವರು ತಮ್ಮ ಕ್ಷೇತ್ರದತ್ತ ನೋಡುವದಕ್ಕೂ ಹೋಗುತ್ತಿಲ್ಲ. ಪರಿಹಾರ ಕುರಿತು ಮಾತನಾಡುತ್ತಿಲ್ಲ.
ಪರಿಹಾರ ಕುರಿತು ವಿಧಾನಸಭೆಯಲ್ಲಿ ಮಾತನಾಡುವ ಅಂದರೆ ಸಮಯ ನೀಡುತ್ತಿಲ್ಲ. ಹೊರಗಡೆ ತಮ್ಮ ಕ್ಷೇತ್ರ ಸಂತ್ರಸ್ತರನ್ನು ಭೇಟಿ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದರು. ಜಗಧೀಶ ಶೆಟ್ಟರ ಮಂತ್ರಿಯಾಗಿದ್ದಾರೆ ಅಷ್ಟೆ ಸಾಕು ಎಂಬಂತೆ ಮಾತಾನಾಡದೆ ಕೂತಿದ್ದಾರೆ. ಸಿಎಂ ಆದವರು ಮಂತ್ರಿಗಿರಿಗೆ ಸುಮ್ಮನಾಗಿದ್ದಾರೆ. ಸೋತವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿರುವದು ಅಸಮಾಧಾನವಿದ್ದರೂ ಹೈಕಮಾಂಡ ಹತ್ತಿರ ಫೈಟ್ ಮಾಡದೆ ಸುಮ್ಮನಾಗಿದ್ದಾರೆ ಎಂದು ಕುಟುಕಿದರು.