ಎಮ್ಮೆ ಮಾತ್ರ ಅಲ್ಲ ಎಮ್ಮೆಲ್ಲೆನು ಮಾರಾಟ – ಸಿದ್ರಾಮಯ್ಯ ವಾಗ್ದಾಳಿ
ಎಮ್ಮೆ ಮಾರಾಟ ಕೇಳಿದ್ವಿ ಈಗ ಎಮ್ಮೆಲೆ ಜಾಧವ ಸಹ ಮಾರಾಟ ಸಿದ್ರಾಮಯ್ಯ
ಚಿಂಚೋಳಿಃ ಕಾಂಗ್ರೇಸ್ ನವರು ದೇಶಕ್ಕಾಗಿ ಜೈಲಿಗೆ ಹೋಗಿದ್ದಾರೆ. ಆದರೆ ಬಿಜೆಪಿಯವರು ಏನಾದರೂ ಹೋಗಿದ್ದರೆ ಅದು ಭಷ್ಟಾಚಾರ ಮಾಡಿ ಜೈಲಿಗೆ ಹೋಗಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ತೀಕ್ಷ್ಣವಾಗಿ ಟೀಕಿಸಿದರು.
ಕೊಡದೂರು ಗ್ರಾಮದಲ್ಲಿ ನಡೆಸ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಆಹಾರ ಭದ್ರತೆ ಕಾಯಿದೆ, ಶೈಕ್ಷಣಿಕ ಹಕ್ಕು ಕಾಯಿದೆ, ಮಾಹಿತಿ ಹಕ್ಕು ಕಾಯಿದೆ ಹಾಗೂ ನರೇಗಾ ಜಾರಿಗೆ ತಂದಿದ್ದು ಮಾಜಿಪಿಎಂ ಮನಮೋಹನಸಿಂಗ್ ಅಂತ ಒಂದಾದರೂ ಇಂತ ಯೋಜನೆ ತಂದಿದ್ದರೇ ಹೇಳಲಿ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯವರು ಲೂಟಿಕೋರರು ಎಂದು ಜರಿದ್ದ ಮಾಜಿ ಸಿಎಂ ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಹಾಲಪ್ಪ, ಜನಾರ್ಧನರೆಡ್ಡಿ ಅಮಿತ್ ಶಾ ಜೈಲಿಗೆ ಹೋಗಿ ಬಂದವರು. ಜೈಲಿಗೆ ಹೋಗಿದ್ದು ಯಾಕೆ? ಬೀಗತನ ಮಾಡಕ್ಕೋಗಿದ್ರಾ? ಎಂದು ಪ್ರಶ್ನಿಸಿದರು.
ಜಾಧನ್ ಅವರನ್ನು ಏಕವಚನದಲ್ಲಿ ಝಾಡಿಸಿದ ಸಿದ್ದರಾಮಯ್ಯ, ಎರಡು ಸಲ ನೀವು ಆರಿಸಿ ಕಳಿಸಿದ ಜಾಧವ್ ಬಿಜೆಪಿಗೆ ಹೋಗಿದ್ದು ಮತದಾರರಿಗೆ ಅಗೌವರ ತೋರಿಸಿದ್ದಾನೆ. ಅವನಿಗೆ ಮರ್ಯಾದೆ ಇದೆಯೇನ್ರೀ ಎಂದು ಟೀಕಿಸಿದರು.
ಎಮ್ಮೆಗಳು ಮಾರಾಟವಾಗಿದ್ದನ್ನು ನೋಡಿದ್ದೆವು ಜಾಧವ್ ಬಿಜೆಪಿಗೆ ಮಾರಾಟವಾಗಿ ಎಮ್ಮೆಲ್ಲೆ ಮಾರಾಟವಾಗಿರುವುದನ್ನು ನೋಡುವಂತಾಯ್ತು ಎಂದು ಮಾರ್ಮಿಕವಾಗಿ ಹೇಳಿದರು.
ನಿಮ್ಮ ನಂಬಿಕೆಗೆ ದ್ರೋಹ ಮಾಡಿದ ಜಾಧವ್ ತನ್ನ ಮಗನನ್ನು ನಿಲ್ಲುಸಿದ್ದಾನೆ ಅವನನ್ನು ಸೋಲಿಸಿ ಎಂದು ಕರೆ ನೀಡಿದರು.
ಜಾಧವ್ ಹಾಗೂ ಅವನ ಮಗ ಇಬ್ಬರು ಸೋತು ಖರ್ಗೆ ಹಾಗೂ ರಾಠೋಡ್ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೇದಿಕೆಯ ಮೇಲೆ ಸಂಸದರಾದ ಹಾಗೂ ಕಾಂಗ್ರೇಸ್ ನಾಯಕರಾದ ಎಂ ಮಲ್ಲಿಕಾರ್ಜುನ ಖರ್ಗೆ, ಎಂಎಲ್ ಸಿಗಳಾದ ಸಿಎಂ ಇಬ್ರಾಹಿಂ, ಶರಣಪ್ಪ ಮಟ್ಟೂರು, ಶಾಸಕರಾದ ಅಮರೇಗೌಡ ಭಯ್ಯಾಪುರ, ನಾರಾಯಣರಾವ್, ಜಗದೇವ್ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರು, ಭೀಮಣ್ಣ ಸಾಲಿ, ರಾಜೇಶ್ ಗುತ್ತೇದಾರ ಸೇರಿದಂತೆ ಮತ್ತಿತರರು ಇದ್ದರು.