ಸಿದ್ರಾಮಯ್ಯ ವಿರುದ್ಧ ಜಾತಿ ನಿಂದನೆ ಪ್ರಕರಣ, ಬಂಧನಕ್ಕೆ ಆಗ್ರಹ
ಎಂಎಲ್ಸಿ ಚಲವಾದಿ ವಿರುದ್ಧ ಸಿದ್ರಾಮಯ್ಯ ಟೀಕೆ
ಸಿದ್ರಾಮಯ್ಯ ವಿರುದ್ಧ ಜಾತಿ ನಿಂದನೆ ಪ್ರಕರಣ, ಬಂಧನಕ್ಕೆ ಆಗ್ರಹ
ಎಂಎಲ್ಸಿ ಚಲವಾದಿ ವಿರುದ್ಧ ಟೀಕೆ ಮಾಡಿದ್ದ ಸಿದ್ರಾಮಯ್ಯಃ ದೂರು ನೀಡಿದ ಚಲವಾದಿ
ಬೆಂಗಳೂರಃ ಬಿಜೆಪಿ ಎಂಎಲ್ಸಿ ಚಲುವಾದಿ ನಾರಾಯಣ ಸ್ವಾಮಿ ವಿರುದ್ಧ ಟೀಕಿಸುವ ಭರದಲ್ಲಿ ಮಾಜಿ ಸಿಎಂ ಸಿದ್ರಾಮಯ್ಯ ಯಾವತ್ತೂ ನೀನು ಅಸ್ಪೃಶ್ಯನೇ ಎಂಬ ಉಲ್ಲೇಖಿಸಿರುವ ಕಾರಣ ಎಂಎಲ್ಸಿ ಚಲವಾದಿ ನಾರಾಯಣ ಸ್ವಾಮಿ ಸಿದ್ರಾಮಯ್ಯ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲು ದೂರು ನೀಡಿದ್ದಾರೆ.
ಸಿದ್ರಾಮಯ್ಯ ನವರ ಬಗ್ಗೆ ಗೌರವವಿದ್ದು, ನೀವು ನನ್ನ ಪಕ್ಷದ ಬಗ್ಗೆ, ಆಡಳಿತ, ಅಭಿವೃದ್ಧಿ ಬಗ್ಗೆ ಟೀಕಿಸಿ ಬೇಡ ಎನ್ನುವದಿಲ್ಲ. ಅದಕ್ಕೆ ನಮ್ಮ ಉತ್ತರವೂ ಇದೆ.
ಆದರೆ ನಮ್ಮನ್ನು ಜಾತಿ ಹೆಸರಲು ನಿಂದಿಸುವದು ಎಷ್ಟರ ಮಟ್ಟಿಗೆ ಸರಿ. ಇದು ನಿಮ್ಮ ಮನಸ್ಥಿತಿ ಏನಿದೆ.? ಆಂತರಿಕವಾಗಿ ನೀವು ದಲಿತರನ್ನು ಎಷ್ಟರಮಟ್ಟಿಗೆ ಗೌರವಿಸುತ್ತೀರಿ ಎಂಬುದನ್ನು ತೋರಿಸುತ್ತದೆ ಎಂದು ನಾರಾಯಣ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಕೂಡಲೆ ಜಾತಿ ನಿಂದನೆ ಪ್ರಕರಣದಡಿ ಸಿದ್ರಾಮಯ್ಯ ನವರನ್ನು ಬಂಧಿಸಬೇಕು ಇಲ್ಲವಾದಲ್ಲಿ ಧರಣಿ ಆರಂಭಿಸುತ್ತೇನೆ ಎಂದು ಎಚ್ಚರಿಸಿದ್ದಾರೆ.