ಪ್ರಮುಖ ಸುದ್ದಿ
ಬ್ಯಾಡ್ಮಿಂಟನ್ ಲೋಕದ ತಾರೆ : ಚಾಂಪಿಯನ್ ಸಿಂಧುಗೆ ಪ್ರಧಾನಿ ಮೋದಿ ಅಭಿನಂದನೆ!
ನವದೆಹಲಿ : ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ.ಸಿಂಧು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಚಾಂಪಿಯನ್ ಕ್ರೀಡಾಪಟು ಪಿ.ವಿ.ಸಿಂದು ಅವರಿಗೆ ಪದಕ ತೊಡಸಿ ಅಭಿನಂದಿಸಿದರು. ಸ್ವಿಝರ್ ಲ್ಯಾಂಡ್ ನ ಬಾಸೆಲ್ ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಕೂಟದಲ್ಲಿ ಚಿನ್ನದ ಪದಕ ಗೆದ್ದು ತಂದ ಸಿಂಧು ದೇಶದ ಹೆಮ್ಮೆ. ವಿಶ್ವ ಬ್ಯಾಡ್ಮಿಂಟನ್ ಲೋಕದ ತಾರೆ ಸಿಂದು ಎಂದು ಕೊಂಡಾಡಿದ ಪ್ರಧಾನಿ ಮೋದಿ ದೇಶಕ್ಕೆ ಕೀರ್ತಿ ತಂದ ಆಟಗಾರ್ತಿಯ ಭೇಟಿ ಖುಷಿ ತಂದಿದೆ ಎಂದಿದ್ದು ಸಿಂಧು ಅವರ ಭವಿಷ್ಯ ಪ್ರಜ್ವಲವಾಗಿರಲಿ ಎಂದು ಹಾರೈಸಿದ್ದಾರೆ.