ಪ್ರಮುಖ ಸುದ್ದಿ

ಸಚಿವ ವಿನಯ ಕುಲಕರ್ಣಿ vs ಸಂಸದ ಪ್ರತಾಪ ಸಿಂಹ : ಸಿಂಹ ಕೇಳಿದ ರಸಪ್ರಶ್ನೆ?

ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ಹನುಮ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಮೆರವಣಿಗೆ ವೇಳೆ ನಡೆದ ಅವಾಂತರಗಳು ನಿಮಗೆಲ್ಲಾ ಗೊತ್ತೇ ಇದೆ. ಸಂಸದ ಪ್ರತಾಪ ಸಿಂಹ ನೇತೃತ್ವದಲ್ಲಿ ನಿಷೇದಾಗ್ನೆ ಉಲ್ಲಂಘಿಸಿ ಮೆರವಣಿಗೆಗೆ ಸಿದ್ಧತೆ ನಡೆಸಿದ್ದು, ಸಂಸದ ಪ್ರತಾಪಸಿಂಹ ರೋಷಾವೇಶದಲ್ಲಿ ಪೊಲೀಸ್ ಬ್ಯಾರಿಕೇಡ್ ಮೇಲೆ ಕಾರು ಚಲಾಯಿಸಿದ್ದು, ಸಂಸದರ ಬಂಧನ, ಬಿಡುಗಡೆ .

ಸಂಸದ ಪ್ರತಾಪ ಸಿಂಹ ಪ್ರಹಸನದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಸಚಿವ ವಿನಯ ಕುಲಕರ್ಣಿ,  ಪ್ರತಾಪ ಸಿಂಹ ಓರ್ವ ಮೆಂಟಲ್. ಮೊದಲು ಬಿಜೆಪಿಯವರು ಪ್ರತಾಪನನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಲಿ ಎಂದು ವ್ಯಂಗ್ಯವಾಡಿದ್ದರು.

ವಿನಯ ಕುಲಕರ್ಣಿಗೆ ತಿರುಗೇಟು ನೀಡಿರುವ ಸಂಸದ ಪ್ರತಾಪ ಸಿಂಹ ಫೇಸ್ ಬುಕ್ ನಲ್ಲಿ ರಸಪ್ರಶ್ನೆ ಕೇಳಿದ್ದಾರೆ. ಹೀಗೊಂದು ರಸಪ್ರಶ್ನೆ:  2007ರಲ್ಲಿ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ನಡೆದ ಶೂಟೌಟ್ನಲ್ಲಿ ಮುಖ್ಯ ಆರೋಪಿ ಆಗಿದ್ದವನ ಸಹೋದರ ಹಾಗೂ ವೈದ್ಯರಿಗೆ ಕಪಾಳಕ್ಕೆ  ಹೊಡೆದಿದ್ದಲ್ಲದೆ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರ ಹತ್ಯೆಯಲ್ಲಿ ಭಾಗಿಯಾಗಿರುವ ಶಂಕೆ ಎದುರಿಸುತ್ತಿರುವ ಪುಂಡ ಯಾರು?! ಎಂದು ಪೋಸ್ಟ್ ಮಾಡಿದ್ದಾರೆ.

ಪ್ರತಾಪ ಸಿಂಹ ಅವರ ರಸಪ್ರಶ್ನೆಗೆ ಅನೇಕರು ರಸವತ್ತಾದ ಉತ್ತರ ನೀಡಿದ್ದಾರೆ. ಕೆಲವರು ನೇರವಾಗಿ ಸಚಿವ ವಿನಯ ಕುಲಕರ್ಣಿ ಅಂತ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಕೊಲೆಕರ್ಣಿ ಅಂತ ಉತ್ತರಿಸಿದ್ದಾರೆ. ಸಚಿವ ವಿನಯ ಕುಲಕರ್ಣಿ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಸಂಸದ ಪ್ರತಾಪ ಸಿಂಹ ಹಾಗೂ ಸಚಿವ ವಿನಯ ಕುಲಕರ್ಣಿ ಮದ್ಯದ ಸಮರ ಫೇಸ್ ಬುಕ್ ನಲ್ಲಿ ಜೋರಾಗಿದೆ.

Related Articles

Leave a Reply

Your email address will not be published. Required fields are marked *

Back to top button