ಪ್ರಮುಖ ಸುದ್ದಿ
ಮಾ.4 ರಂದು ಐತಿಹಾಸಿಕ ಕ್ಷೇತ್ರ ಶಿರಸಿ ಮಾರಿಕಾಂಬ ದೇವಿ ರಥೋತ್ಸವ
ಉತ್ತರ ಕನ್ನಡಃ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದ ರಾಜ್ಯದ ಬಹು ದೊಡ್ಡ ಜಾತ್ರೆ ಶಿರಸಿಯ ಶ್ರೀಮಾರಿಕಾಂಬ ದೇವಿಯ ರಥೋತ್ಸವ ಮಾರ್ಚ್ 4 ರಂದು ನಡೆಯಲಿದೆ.
ಜಾತ್ರಾ ಮಹೋತ್ಸವ ಅಂಗವಾಗಿ ಧಾರ್ಮಿಕ ವಿಧಿ ವಿಧಾನಗಳು ಈಗಾಗಲೇ ಆರಂಭಗೊಂಡಿದ್ದು, ಮಾ.3 ರಿಂದ 11 ರವರೆಗೂ ಜಾತ್ರೆ ನಡೆಯಲಿದೆ.
ಜಾತ್ರೆಗೆ ರಾಜ್ಯ ಸೇರಿದಂತೆ ಹೊರ ರಾಜ್ಯದಿಂದಲು ಅಸಂಖ್ಯಾತ ಭಕ್ತರು ಆಗಮಿಸಲಿದ್ದಾರೆ. ಮಾ.3 ರಂದು ರಥದ ಕಳಸ ಪ್ರತಿಷ್ಠಾಪನವಾಗಲಿದೆ.
ಅಂದೇ ರಾತ್ರಿ ಶ್ರೀಮಾರಿಕಾಂಬ ದೇವಿಯ ಮದುವೆ ವಿಧಿ ವಿಧಾನಗಳು ಜರುಗಲಿವೆ. 4 ರಂದು ರಥೋತ್ಸವ ಮತ್ತು ಶೋಭಾಯಾತ್ರೆ ನಡೆಯಲಿದೆ. ಹೀಗೆ 11 ರವೆಗೆ ಎಲ್ಲಾ ಸೇವೆಗಳು ಶ್ರೀಮಠದ ವಿಧಿವಿಧಾನದಂತೆ ನಡೆಯಲಿವೆ.
ಮಾ.11 ಜಾತ್ರೆ ಮುಕ್ತಾಯವಾಗಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ಮಾಹಿತಿ ಹೊರ ಹಾಕಿದೆ.