ಪ್ರಮುಖ ಸುದ್ದಿ
ಮತ್ತೆ ಆರು ಜನರ ಬಲಿ ಪಡೆದ ‘ಸಾವಿನ ಸಿಡಿಲು’
ಕಲಬುರಗಿ, ಯಾದಗಿರಿಯಲ್ಲಿ ಆರ್ಭಟಿಸಿದ್ದ ಸಿಡಿಲು : ಇಂದು ಮೈಸೂರಿನಲ್ಲಿ ಮರಣ ಮೃದಂಗ!
ಮೈಸೂರು: ಕಳೆದ ಒಂದು ವಾರದಿಂದ ಕಲಬುರಗಿ, ಯಾದಗಿರಿ ಜಿಲ್ಲೆಗಳು ಸೇರಿದಂತೆ ವಿವಿದೆಡೆ ಆರ್ಭಟಿಸಿದ್ದ ಸಿಡಿಲು ಹತ್ತಾರು ಜೀವ ಬಲಿಪಡೆದಿತ್ತು. ಇಂದು ಮೈಸೂರು ಜಿಲ್ಲೆಯಲ್ಲಿ ಸಿಡಿಲು ಬಡಿದು ಆರು ಜನ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಪಿರಿಯಾಪಟ್ಟಣ ತಾಲೂಕಿನ ನಂದಿನಾಥಪುರದಲ್ಲಿ ಭಾರೀ ಮಳೆ ಸುರಿದಿದೆ. ಪರಿಣಾಮ ಹಸು ಮೇಯಿಸಲು ಹೋಗಿದ್ದವರು ಮಳೆಗೆ ಹೆದರಿದ ಗುಡಿಯೊಂದರ ಆಶ್ರಯ ಪಡೆದಿದ್ದಾರೆ. ಆದರೆ, ಸಿಡಿಲು ಮಾತ್ರ ಬೆನ್ನು ಬಿದ್ದ ಬೇತಾಳದಂತೆ ಜನರ ಮೇಲೆ ಬಿದ್ದಿದೆ. ಏಕಕಾಲದಲ್ಲಿ ಆರು ಜನರನ್ನು ಬಲಿ ಪಡೆದಿದೆ. ಹುಣಸವಾಡಿ ಗ್ರಾಮದ ಪುಟ್ಟಣ್ಣಯ್ಯ, ಸುವರ್ಣಮ್ಮ, ಸುದೀಪ್, ತಿಮ್ಮೇಗೌಡ, ಸುಜಯ್ ಮತ್ತು ಉಮೇಶ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಪಿರಿಯಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.