ಮಾಜಿ ಸಿಎಂ SM ಕೃಷ್ಣ ಸಿಎಂ ಬಿಎಸ್‍ವೈಗೆ ಬರೆದ ಪತ್ರದಲ್ಲೇನಿದೆ ಗೊತ್ತಾ.?
ಮಂಡ್ಯದ ಯೋಧ ಗುರು ಚಿತಾಭಸ್ಮ ಇನ್ನೂ ವಿಸರ್ಜನೆಯಾಗಿಲ್ಲ- ಸಿಎಂಗೆ ಪತ್ರ ಬರೆದ ಎಸ್.ಎಂ.ಕೃಷ್ಣ
ಮಂಡ್ಯಃ ಕಳೆದ ವರ್ಷ ಫುಲ್ವಾಮಾ ಘಟನೆಯಲ್ಲಿ ವೀರಮರಣವನ್ನಪ್ಪಿದ ಇಲ್ಲಿನ ಯೋಧ ಗುರು ಮಡಿವಾಳ ಅವರ ಚಿತಾಭಸ್ಮ ಇದುವರೆಗೂ ವಿಸರ್ಜನೆಯಾಗಿಲ್ಲ. ಮತ್ತು ಯೋಧ ಗುರು ಸ್ಮಾರಕ ನಿರ್ಮಿಸಬೇಕಾದ ರಾಜ್ಯ ಸರ್ಕಾರ ನಿರ್ಲಕ್ಷವಹಿಸಿದೆ. ಈ ಕುರಿತು ಮಾಜಿ ಸಿಎಂ ಬಿಜೆಪಿ ಹಿರಿಯ ಮುಖಂಡ ಎಸ್.ಎಂ.ಕೃಷ್ಣಾ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಸೂಕ್ತ ಕ್ರಮಕೈಗೊಳ್ಳಲು ತಿಳಿಸಿದ್ದಾರೆ ಎನ್ನಲಾಗಿದೆ.
ಫೆ.14, 2019 ರಂದು ಕಾಶ್ಮೀರದ ಫುಲವಾಮಾದಲ್ಲಿ ನಡೆದ ದೇಶದ ಘೋರ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಇಡಿ ದೇಶ ಮರಗಿತ್ತು. ಕರ್ನಾಟಕದ ಮಂಡ್ಯ ಮೂಲದ ಯೋಧ ಗುರು ಅವರು ವೀರ ಮರಣ ಅಪ್ಪಿದ್ದರು. ಅವರ ಚಿತಾಭಸ್ಮ ಇದುವರೆಗೂ ವಿಸರ್ಜನೆ ಮಾಡದಿರುವದು ಖಂಡನೀಯ ಮತ್ತು ಬೇಸರ ತರಿಸಿದೆ ಎಂದು ತಿಳಿಸಿದ ಅವರು,
ಯಾವುದೇ ಪಕ್ಷ ಆಡಳಿತದಲ್ಲಿರಲಿ ಇಂತಹ ವಿಷಯಗಳ ಬಗ್ಗೆ ತುರ್ತು ಗಮನ ಹರಿಸುವದು ಅಗತ್ಯವಿದೆ ಎಂದು ಅವರು ಪತ್ರದ ಮೂಲಕ
ತಿಳಿಸಿದ್ದಾರೆ. ಅಲ್ಲದೆ ಮೊದಲು ಯೋಧ ಗುರು ಅವರ ಚಿತಾಭಸ್ಮ ಯಾವ ಕಾರಣಕ್ಕೆ ವಿಸರ್ಜನೆ ಮಾಡಿರುವದಿಲ್ಲ ಎಂಬುದನ್ನು ಗುರುತಿಸಿ ಶಾಸ್ತೋಕ್ತವಾಗಿ ವಿಸರ್ಜನೆಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.