ಸಮುದಾಯ ಅಭಿವೃದ್ಧಿಗೆ ಒಗ್ಗಟ್ಟು ಅಗತ್ಯ-ಶ್ರೀರಾಮುಲು
ವಾಲ್ಮೀಕಿ ಜಯಂತ್ಯುತ್ಸವ, ಅದ್ದೂರಿ ಸಮಾರಂಭ
ಯಾದಗಿರಿಃ ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಒಗ್ಗಟ್ಟು ಅಗತ್ಯವಿದ್ದು, ಸಮುದಾಯದ ಸಂಘಟಕರು ಸರ್ವರೂ ಸೇರಿ ಸಮುದಾಯದ ಏಳ್ಗೆಗೆ ಚಿಂತನೆ ನಡೆಸಬೇಕು ಎಂದು ಶಾಸಕ, ಸಮುದಾಯದ ರಾಜ್ಯ ಮುಖಂಡ ಶ್ರೀರಾಮುಲು ತಿಳಿಸಿದರು.
ನಗರದಲ್ಲಿ ವಾಲ್ಮೀಕಿ ಸಮುದಾಯ ಆಯೋಜಿಸಿದ್ದ ವಾಲ್ಮೀಕಿ ಸಮುದಾಯ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜ ಬೆಳವಣಿಗೆಗೆ ಶ್ರಮ ಅಗತ್ಯ. ಸಮುದಾಯದ ಬೆಳವಣಿಗೆಗೆ ನಾವೆಲ್ಲ ನಾಯಕರು ಒಂದಾಗಿ ಶ್ರಮಿಸಲಿದ್ದೇವೆ.
ರಾಜ್ಯದಲ್ಲಿ ಬಲಿಷ್ಠ ಸಮುದಾಯವಿದ್ದು, ಸಮಗ್ರ ಸಂಘಟನಾತ್ಮಕ ಶಕ್ತಿ ವೃದ್ಧಿಯಾಗಬೇಕಿದೆ. ಯುವ ಸಮುದಾಯ ಆ ನಿಟ್ಟಿನಲ್ಲಿ ಶ್ರಮಿಸಬೇಕು. ಇಂದು ಕಾರ್ಯಕ್ರಮದಲ್ಲಿ ಸೇರಿದ ಜನಸ್ತೋಮ ನೋಡಿ ಒಗ್ಗಟ್ಟು ನೋಡಿ ಸಂತವೆನಿಸಿತು.
ಸರ್ಕಾರಿ ಯೋಜನೆಗಳ ಸದುಪಯೋಗ ಪಡೆದುಕೊಂಡು ಹಿಂದುಳಿದ ನಮ್ಮ ಜನಾಂಗದ ಜನರನ್ನು ಜಾಗೃತಿಗೊಳಿಸುವ ಕೆಲಸವಾಗಬೇಕು. ಅಲ್ಲದೆ ಪ್ರಾಮುಖ್ಯವಾಗಿ ಉಳಿದೆಲ್ಲ ಸಮುದಾಯಗಳ ಜೊತೆಗೆ ಉತ್ತಮ ಬಾಂಧ್ಯವ್ಯ ಹೊಂದಿರಬೇಕು.
ಜಗತ್ತಿಗೆ ಶ್ರೇಷ್ಠ ಗ್ರಂಥ ನೀಡಿದ ಮಹರ್ಷಿ ವಾಲ್ಮೀಕಿಯವರ ಹೆಸರು ನಾವೆಲ್ಲ ಉಳಿಸಬೇಕಿದೆ. ಅವರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಂಡು ನಡೆಯಬೇಕು. ರಾಮಾಯಣ ನರೆದ ಆದಿಕವಿ ಎನಿಸಿದ ಅವರು, ಇಡಿ ಮಾನವಕುಲಕ್ಕೆ ಉತ್ತಮ ಜೀವನ ನಡೆಸುವ ಸಂದೇವನ್ನು ಕೃತಿಯಲ್ಲಿ ನೀಡಿದ್ದಾರೆ.
ಅಂತಹ ಮಹಾತ್ಮನ ನೆನೆದು ಆತನ ಮಾರ್ಗದಲ್ಲಿ ನಾವೆಲ್ಲ ಒಂದಾಗಿ ಮುನ್ನಡೆಯಬೇಕಿದೆ. ಇವತ್ತು ವಿವಿಧ ರಾಜಕೀಯ ಪಕ್ಷಗಳಲ್ಲಿ ನಮ್ಮ ಸಮುದಾಯದ ಹಲವರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಆದರೆ ಸಮುದಾಯ ಎಂದಾಗಿ ನಾವೆಲ್ಲ ಒಂದಾಗಿದ್ದೇವೆ. ಸಮಾಜದ ಯಾವುದೇ ಕೆಲಸಕ್ಕೂ ಉಗ್ರಪ್ಪನವರು, ಜಾರಕಿಹೊಳಿ, ರಾಜೂಗೌಡ ನಾನು ಎಲ್ಲರೂ ಸೇರಿ ದೆಹಲಿ ಬಾಗಿಲು ತಟ್ಟಲು ಸಿದ್ಧರಿದ್ದೇವೆ.
ಶೈಕ್ಷಣಿಕವಾಗಿ, ರಾಜಕೀಯವಾಗಿ ಇನ್ನಷ್ಟು ಬಲಾಢ್ಯರಾಗಬೇಕಿದೆ. ಆ ನಿಟ್ಟಿನಲ್ಲಿ ಸಮುದಾಯವನ್ನು ಬಲಪಡಿಸಲು ನಿರಂತರ ಶ್ರಮ ಅಗತ್ಯ. ಮುನ್ನೋಡಿ ಕೆಲಸ ಮಾಡಿದ್ದಲ್ಲಿ ಸಮಾಜ ಬೆಳೆಯಲಿದೆ. ಯಾವುದೆ ತಪ್ಪು ಒಪ್ಪುಗಳಿದ್ದರೂ ಸಮಾಜ ಸಂಘಟನೆಯಲ್ಲಿ ಚರ್ಚಿಸಿ ಸುಕ್ತ ನಿರ್ಧಾರಕೈಗೊಂಡು ಮುಂದಿನ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನೂತನ ಎಂ.ಪಿ. ಉಗ್ರಪ್ಪ, ರಾಯಚೂರ ಎಂ.ಪ. ಬಿ.ವಿನಾಐಕ, ಶಾಸಕ ರಾಜೂಗೌಡ ಮಾತನಾಡಿದರು. ಈ ಸಂದರ್ಭದಲ್ಲಿ ಡಾ.ಎಸ್.ಎಸ್.ನಾಯಕ, ಡಾ.ಅಮರೇಶ ಯಾತಗಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲುಇ ಸಮುದಾಯ ಸಗರ ಗ್ರಾಮದ ಬಿಎಸ್‍ಎಫ್ ಯೋಧ ದುರ್ಗಪ್ಪ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸಾಧಕರನ್ನು ಗೌರವಿಸಲಾಯಿತು.