ಸರ್ಕಾರಿ ಆಸ್ಪತ್ರೆಯಲ್ಲಿ CT ಸ್ಕ್ಯಾನ್ ಸೌಲಭ್ಯ ಕಲ್ಪಿಸಲು ಆಗ್ರಹ
3 ನೇ ಅಲೆಯ ಸಿದ್ಧತೆ ವಿಳಂಬವಾಗದಿರಲಿ
yadgiri, ಶಹಾಪುರಃ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 3 ನೇ ಅಲೆಗೆ ಸಂಬಂಧಿಸಿದಂತೆ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಮತ್ತು ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ಹಾಗೂ ಸಿಟಿ ಸ್ಕ್ಯಾನ್ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಇಲ್ಲಿನ ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘ ತಾಲೂಕು ಆರೋಗ್ಯಾಧಿಕಾರಿಗಲಿಗೆ ಮನವಿ ಪತ್ರ ಸಲ್ಲಿಸಿತು.
ಕಳೆದ ಎರಡು ವರ್ಷದಿಂದ ಕೋವಿಡ್ ವೈರಸ್ ಅಟ್ಟಹಾಸ ಮೆರೆತಿದ್ದು, ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಕಲ ಸೌಕರ್ಯ ಕಲ್ಪಿಸುವ ಅಗತ್ಯವಿದೆ. ಕೋವಿಡ್ ತೀವ್ರತೆ ಹೆಚ್ಚಾಗುತ್ತಿದ್ದು, ಬೆಡ್, ಐಸೋಲೇಷನ್ ವಾರ್ಡ್, ಆಕ್ಸಿಜನ್ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆವಹಿಸಬೇಕು. ಅಲ್ಲದೆ ಸಿಬ್ಬಂದಿ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು ಸಂಘ ತಿಳಿಸಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷ ಪ್ರದೀಪ ಅಣಬಿ, ಹಣಮಂತ ವಡಿಗೇರಾ, ಭೋಜಪ್ಪ ಮುಂಡಾಸ, ಸಂಗಪ್ಪ ದಿಗ್ಗಿ, ಮಲ್ಲಿಕಾರ್ಜುಣ ದೋರನಹಳ್ಳಿ, ಚನ್ನಪ್ಪ, ಪರಶುರಾಮ ಸಿಂಗನಹಳ್ಳಿ, ಬಸ್ಸು ಶಿರವಾಳ, ಸಂಗಮೇಶ ಬೇವಿನಹಳ್ಳಿ ಇತರರಿದ್ದರು.