ಪ್ರಮುಖ ಸುದ್ದಿ
ಕೂಡಲಸಂಗಮ ಸಂಗಮನಾಥ ದೇವಾಲಯಕ್ಕೆ ನೀರು.!
ಕೂಡಲಸಂಗಮಃ ಇಲ್ಲಿನ ಸಂಗಮನಾಥ ದೇವಾಲಯದ ಆವರಣಕ್ಕೆ ನೀರು ನುಗ್ಗಿದ್ದು, ಈಗಾಗಲೇ ಬಸವ ಮಂಟಪ ಮುಳಗಡೆಯಾಗಿದೆ. ಅಪಾಯದ ಮಟ್ಟ ಮೀರಿ ಇಲ್ಲಿನ ನದಿ ಹರಿಯುತ್ತಿದ್ದು, ಯಾವುದೇ ಕ್ಷಣದಲ್ಲಿ ಸಂಗಮನಾಥನ ದೇವಾಲಯವು ಮುಳುಗಬಹುದು ಎಂದು ಹೇಳಲಾಗುತ್ತಿದೆ.
ಪ್ರವಾಸಿಗರು, ನಾಗರಿಕರು ದೇವಸ್ಥಾನದ ಸಮೀಪ, ನದಿ ತೀರದ ಹತ್ತಿರ ತೆರಳದಂತೆ ಎಚ್ಚರಿಕೆವಹಿಸಲು ಸಂಬಂಧಿಸಿದ ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ.